ADVERTISEMENT

ಪಿತೃಪಕ್ಷದ ಅಮವಾಸ್ಯೆ: ಮರಿ ಮಾರಾಟ ಭರ್ಜರಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 5:27 IST
Last Updated 16 ಸೆಪ್ಟೆಂಬರ್ 2020, 5:27 IST
ಪಟ್ಟಣದ ಎಪಿಎಂಸಿ ಆವರಣದ ಮರಿ ಮಾರುಕಟ್ಟೆಯಲ್ಲಿ ಮೇಕೆ ಕೊಳ್ಳಲು ಸೇರಿದ್ದ ಗ್ರಾಹಕರು
ಪಟ್ಟಣದ ಎಪಿಎಂಸಿ ಆವರಣದ ಮರಿ ಮಾರುಕಟ್ಟೆಯಲ್ಲಿ ಮೇಕೆ ಕೊಳ್ಳಲು ಸೇರಿದ್ದ ಗ್ರಾಹಕರು   

ತುರುವೇಕೆರೆ: ಪಿತೃಪಕ್ಷದ ಅಮವಾಸ್ಯೆಯ ಹಬ್ಬದ ಕಾರಣ ಪಟ್ಟಣದ ಎಪಿಎಂಸಿ ಆವರಣದ ಮರಿಮಾರು ಕಟ್ಟೆಯಲ್ಲಿ ಮೇಕೆ ಮಾರಾಟ ಭರ್ಜರಿಯಾಗಿ ನಡೆಯಿತು.

ಬುಧವಾರ ಅಮವಾಸ್ಯೆ ಹಬ್ಬಿರುವುದರಿಂದ ಸೋಮವಾರದ ಮರಿ ಸಂತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ, ಕುರಿ, ಸಿಂದೂರು ಆಡುಗಳನ್ನು ರೈತರು ಮತ್ತು ವ್ಯಾಪಾರಿಗಳು ತಂದಿದ್ದರು.

ಸ್ಥಳೀಯ ಹೋತ, ಮೇಕೆ ಹಾಗೂ ಟಗರುಗಳಿಗೆ ಹೆಚ್ಚು ಬೇಡಿಕೆ ಇತ್ತು.

ADVERTISEMENT

ಸಂತೆಗೆ ಕಡಿಮೆ ಸಂಖ್ಯೆಯ ಮೇಕೆಗಳು ಪೂರೈಕೆಯಾಗಿದ್ದು, ಕೊಳ್ಳವವರು ಸಾವಿರಾರು ಸಂಖ್ಯೆಯಲ್ಲಿ ಬಂದಿದ್ದರಿಂದ 10 ಕೆ.ಜಿ ತೂಕದ ಮೇಕೆಗಳಿಗೂ ₹16 ಸಾವಿರದಿಂದ ₹17 ಸಾವಿರ ಬೆಲೆಯಿತ್ತು. ದಷ್ಟಪುಷ್ಟ ಆಡು, ಹೋತಗಳಿಗೆ ₹30 ಸಾವಿರದಿಂದ ₹40 ಸಾವಿರದವರೆಗೂ ಬೆಲೆ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.