ಮಧುಗಿರಿ: ಪಟ್ಟಣದ ರಾಘವೇಂದ್ರ ಸ್ವಾಮಿ ವೃತ್ತದಲ್ಲಿ ಗುರುವಾರ ಹೆಜ್ಜೇನು ದಾಳಿ ನಡೆಸಿದ್ದು, 17 ಮಂದಿ ಅಸ್ವಸ್ಥಗೊಂಡು ತಾಲ್ಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಟ್ಟಣದ ರಾಘವೇಂದ್ರ ಸ್ವಾಮಿ ದೇವಾಲಯದ ಆವರಣದಲ್ಲಿ ಬೃಹತ್ ಅರಳಿ ಮರದಲ್ಲಿ ಹೆಜ್ಜೇನು ಗೂಡಿತ್ತು. ಗುರುವಾರ ರಾಘವೇಂದ್ರ ಸ್ವಾಮಿಗೆ ಭಕ್ತರು ಕರ್ಪೂರ ಹಾಗೂ ಊದುಬತ್ತಿ ಹಚ್ಚಿದ್ದರಿಂದ ಹೆಜ್ಜೇನು ಎದ್ದು ವೃತ್ತದಲ್ಲಿ ಓಡಾಡುತ್ತಿದ್ದ ಜನರ ಮೇಲೆ ದಾಳಿ ನಡೆಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.