
ತಿಪಟೂರು: ನಗರದ ಕಲ್ಪತರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಂಬಿಎ ವಿಭಾಗದಿಂದ 2025-26ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು.
ತುಮಕೂರು ಇನೊವೇಷನ್, ಇಂಕ್ಯೂಬೇಶನ್ ಹಾಗೂ ಎಂಟ್ರಪ್ರೆನರ್ಷಿಪ್ ಕೌನ್ಸಿಲ್ ಸಿಇಒ ಸತೀಶ್ ಎಂ.ಭಾವನ್ಕರ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾರ್ಹತೆ ಹಾಗೂ ನಾಯಕತ್ವ ಕೌಶಲ ಮುಖ್ಯ. ಅಂಕಗಳಿಕೆಗೆ ಸೀಮಿತವಾಗದೆ, ನೈತಿಕ ಮೌಲ್ಯ ಮತ್ತು ಪ್ರಾಯೋಗಿಕ ಜ್ಞಾನದಲ್ಲೂ ಮುಂದುವರಿಯಬೇಕು ಎಂದು ಸಲಹೆ ನೀಡಿದರು
ಸಂಸ್ಥೆ ಖಜಾಂಚಿ ಟಿ.ಎಸ್.ಶಿವಪ್ರಸಾದ್ ಮಾತನಾಡಿ, ಸಂಸ್ಥೆಯಲ್ಲಿ ಒದಗಿಸಿರುವ ಆಧುನಿಕ ಸೌಕರ್ಯ, ತರಬೇತಿ ಕೋರ್ಸ್‌ಗಳು ಮತ್ತು ಇಂಕ್ಯೂಬೇಶನ್ ಲ್ಯಾಬ್‌ಗಳು ಇಂದಿನ ತಂತ್ರಜ್ಞಾನಾಧಾರಿತ ಶಿಕ್ಷಣದ ಅಗತ್ಯತೆಗಳನ್ನು ಪೂರೈಸುವಂತೆ ಸಂಸ್ಥೆ ನಿರಂತರವಾಗಿ ಮುಂದುವರಿಯುತ್ತಿದೆ ಎಂದರು.
ಸಂಸ್ಥೆ ಅಧ್ಯಕ್ಷ ಪಿ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ‘ಸಂಸ್ಥೆ ಗುಣಮಟ್ಟದ ಶಿಕ್ಷಣ ಹಾಗೂ ಮಾನವೀಯ ಮೌಲ್ಯಗಳಿಗೆ ಸಮನ್ವಯ ಸಾಧಿಸುತ್ತಿದೆ. ನಿಮ್ಮೆಲ್ಲರ ಯಶಸ್ಸೇ ಸಂಸ್ಥೆಯ ಸಾಧನೆ’ ಎಂದರು.
ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷ ಬಿ.ಎಸ್.ಉಮೇಶ್, ಬಾಗೇಪಲ್ಲಿ ನಟರಾಜ್, ಟಿ.ಎಸ್.ಬಸವರಾಜು, ಜಿ.ಪಿ.ದೀಪಕ್, ಕಾರ್ಯದರ್ಶಿ ಜಿ.ಎಸ್.ಉಮಾಶಂಕರ್, ಎಂ.ಆರ್.ಸಂಗಮೇಶ್, ಎಚ್.ಜಿ.ಸುಧಾಕರ್, ಟಿ.ಯು.ಜಗದೀಶಮೂರ್ತಿ ಪ್ರಾಂಶುಪಾಲ ಎಚ್.ಸಿ.ಸತೀಶ್‌ಕುಮಾರ್, ಮಿಟ್ಟಾ ಶೇಖರ್ ಗೌಡ, ಎಂ.ಬಿ.ಎ. ವಿಭಾಗದ ಮುಖ್ಯಸ್ಥೆ ದೀಪ್ತಿ ಅಮಿತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.