ADVERTISEMENT

ತುಮಕೂರು ನಗರ ಪಾಲಿಕೆಯಿಂದ ಮನೆ ಬಾಗಿಲಿಗೆ ಕುರಿಮಾಂಸ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 15:19 IST
Last Updated 19 ಏಪ್ರಿಲ್ 2020, 15:19 IST
ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಕುವೆಂಪುನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು
ಸಂಚಾರಿ ಮಾಂಸ ಮಾರಾಟ ಮಳಿಗೆಗೆ ಕುವೆಂಪುನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು   

ತುಮಕೂರು: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಹಾಗೂ ತುಮಕೂರು ಮಹಾನಗರ ಪಾಲಿಕೆಯಿಂದ ಮಾಂಸವನ್ನು ಮನೆ ಬಾಗಿಲಿಗೆ ತಲುಪಿಸುವ ಸಂಚಾರಿ ಮಾರಾಟ ಮಳಿಗೆಗೆ ಕುವೆಂಪು ನಗರದಲ್ಲಿ ಭಾನುವಾರ ಚಾಲನೆ ನೀಡಲಾಯಿತು.

ಗ್ರಾಹಕರು ಖರೀದಿಗೆ ಒಂದು ದಿನ ಮುಂಚಿತವಾಗಿ ಸಂಪರ್ಕಿಸಬೇಕು. ಭಾನುವಾರ ಮತ್ತು ಮಂಗಳವಾರ ಮಾತ್ರ ಮಾಂಸ ಮಾರಾಟ ಮಾಡಲಾಗುತ್ತದೆ. ಪ್ರತಿ ಕೆ.ಜಿ. ಕುರಿ ಮಾಂಸಕ್ಕೆ ₹650 ನಿಗದಿ ಮಾಡಲಾಗಿದೆ.

ಸಂಚಾರಿ ಮಳಿಗೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಟಿ.ಭೂಬಾಲನ್‌, ನಿಗಮದ ಉಪನಿರ್ದೇಶಕ ಜಿ.ಎಂ.ನಾಗರಾಜ್, ಪಾಲಿಕೆ ಆರೋಗ್ಯ ಅಧಿಕಾರಿ ಡಾ.ನಾಗೇಶ್‌ ಕುಮಾರ್‌ ಇದ್ದರು.

ADVERTISEMENT

ಸಂಪರ್ಕ: 8147651991, 9900391897

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.