ADVERTISEMENT

ಆಚರಣೆಗಳಿಂದ ಮಾನಸಿಕ ಆರೋಗ್ಯ

ನಗರದ ಮಾನಸಧಾರ ಪುನರ್ವಸತಿ ಕೇಂದ್ರದಲ್ಲಿ ನಡೆದ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ಡಾ.ಜಿ.ಪದ್ಮಾಕ್ಷೀ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 12:09 IST
Last Updated 2 ಜನವರಿ 2019, 12:09 IST
ಕಾರ್ಯಕ್ರಮದಲ್ಲಿ ಡಾ.ಜಿ.ಪದ್ಮಾಕ್ಷೀ, ಚೇತನ್‌ ಬಿ.ವಿ.ಬಿ., ಸಂಸ್ಥೆಯ ಸೇವಾಕರ್ತರಾದ ಕಾವ್ಯ, ಪ್ರತಿಭಾ, ಸೇಜಲ್‌, ಲಕ್ಷಮ್ಮ, ಸುಮಾ ಮತ್ತು ಸುಷ್ಮಾ ಇದ್ದಾರೆ
ಕಾರ್ಯಕ್ರಮದಲ್ಲಿ ಡಾ.ಜಿ.ಪದ್ಮಾಕ್ಷೀ, ಚೇತನ್‌ ಬಿ.ವಿ.ಬಿ., ಸಂಸ್ಥೆಯ ಸೇವಾಕರ್ತರಾದ ಕಾವ್ಯ, ಪ್ರತಿಭಾ, ಸೇಜಲ್‌, ಲಕ್ಷಮ್ಮ, ಸುಮಾ ಮತ್ತು ಸುಷ್ಮಾ ಇದ್ದಾರೆ   

ಹಬ್ಬ ಹರಿದಿನಗಳು ಮತ್ತು ವಾರ್ಷಿಕ ಸಂಭ್ರಮಾಚರಣೆಗಳು ನಮ್ಮ ಮನಸ್ಸಿನ ಆತಂಕ, ದುಗುಡ ಬೇಸರಗಳನ್ನು ಕಡಿಮೆಗೊಳಿಸಿ ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತವೆ ಎಂದು ಮನೋಚಿಕಿತ್ಸಕಿ ಡಾ.ಜಿ.ಪದ್ಮಾಕ್ಷೀ ತಿಳಿಸಿದರು.

ನಗರದ ಅಶೋಕನಗರದ ಮಾನಸಧಾರ ಎಂಬ ಮದ್ಯವ್ಯೆಸನಿಗಳು ಮತ್ತು ಮಾನಸಿಕ ಕಾಯಿಲೆಗಳ ಪುನರ್ವಸತಿ ಕೇಂದ್ರದಲ್ಲಿ ಸೇಜಲ್ ನ್ಯೂ ಲೈಫ್ ಫೌಂಡೇಷನ್‌ನಿಂದ ಆಯೋಜಿಸಿದ್ದ ನೂತನ ವರ್ಷದ ಸಂಭ್ರಮಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಮನುಷ್ಯರು ಇಂದು ಹಲವಾರು ನಕಾರಾತ್ಮಕ ಚಿಂತನೆ, ನಡೆವಳಿಕೆ, ದುರಾಭ್ಯಾಸಗಳಿಂದ ಮಾನಸಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇದರಿಂದ ಕುಟುಂಬದಲ್ಲಿ ಸಾಮರಸ್ಯ ಕುಂಠಿತಗೊಂಡು ಮನೋರೋಗಿಗಳಲ್ಲಿ ಮಾನಸಿಕ ಕಾಯಿಲೆ ಉಲ್ಬಣಗೊಳ್ಳುತ್ತಿದೆ ಎಂದು ರೋಗಿಗಳಿಗೆ ತಿಳಿಸಿದರು.

ಹಾಗಾಗಿ ಸ್ನೇಹಿತರು ಕುಟುಂಬ ವರ್ಗದವರು ಸೇರಿ ಸಂಭ್ರಮಾಚರಣೆ ಮಾಡುವುದರಿಂದ ಸಾಕಷ್ಟು ಮಾನಸಿಕ ಕಾಯಿಲೆಗಳು ಕಡಿಮೆಯಗುತ್ತವೆ. ಆದರೆ ಪ್ರಸ್ತುತ ಆಚರಣೆಗಳ ನೆಪದಲ್ಲಿ ಮದ್ಯಪಾನ ಮಾಡುತ್ತಿರುವುದು ವಿಷಾದನೀಯ ಎಂದು ಕಳವಳ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.