
ಪ್ರಜಾವಾಣಿ ವಾರ್ತೆ
ಶಿರಾ: ತಾಲ್ಲೂಕಿನ ಮಾಗೋಡು ಗ್ರಾಮದ ರಂಗನಾಥ ಜಾತ್ರಾ ಮಹೋತ್ಸವದಲ್ಲಿ ಎರಡೂವರೆ ವರ್ಷದ ಬಾಲಕ ಯುವರಾಜು ಕಾಣೆಯಾಗಿದ್ದಾನೆ.
ತಾಲ್ಲೂಕಿನ ಮುಷ್ಟಿಗರಹಳ್ಳಿ ಗ್ರಾಮದ ರಂಗಯ್ಯ, ಸೌಮ್ಯ ದಂಪತಿ ಪುತ್ರ ಯುವರಾಜು ತನ್ನ ಅಜ್ಜಿ ಮತ್ತು ತಾತನ ಜತೆ ಜಾತ್ರೆಗೆ ಹೋಗಿದ್ದ ಸಮಯದಲ್ಲಿ ಕಾಣೆಯಾಗಿದ್ದಾನೆ. ಎರಡೂವರೆ ವರ್ಷದ ಬಾಲಕ ಎಳೆಗೆಂಪು ಬಣ್ಣ, ದುಂಡು ಮುಖ, ಎರಡೂವರೆ ಅಡಿ ಎತ್ತರ ಇದ್ದು ಮಗುವಿನ ಬಗ್ಗೆ ಮಾಹಿತಿ ದೊರೆತರೆ ಶಿರಾ ನಗರ ಪೊಲೀಸ್ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.