ADVERTISEMENT

ಪಟ್ಟನಾಯಕನಹಳ್ಳಿ| ಭೂಮಿಪೂಜೆಗೆ ಶಾಸಕ ಸೀಮಿತ: ಟಿ.ಬಿ. ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 5:57 IST
Last Updated 29 ಮಾರ್ಚ್ 2023, 5:57 IST
ಪಟ್ಟನಾಯಕನಹಳ್ಳಿ ಸಮೀಪದ ಬೆಟ್ಟಪ್ಪನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿದರು
ಪಟ್ಟನಾಯಕನಹಳ್ಳಿ ಸಮೀಪದ ಬೆಟ್ಟಪ್ಪನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಮಾತನಾಡಿದರು   

ಪಟ್ಟನಾಯಕನಹಳ್ಳಿ: ‘ತಾಲ್ಲೂಕಿನ ಜನತೆ ಈ ಬಾರಿ ಗುದ್ದಲಿ ಪೂಜೆ ಶಾಸಕರನ್ನು ಅರಿಸಿಕೊಳ್ಳುತ್ತೀರಾ ಅಥವಾ ಗುರುತರ ಕೆಲಸ ಮಾಡಿ ಮತ್ತಷ್ಟು ಕೆಲಸ ಮಾಡಲು ಯೋಚಿಸಿರುವ ನನಗೆ ಮತ ನೀಡುತ್ತೀರಾ’ ಎಂದು ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರು, ಜನರಿಗೆ ಪ್ರಶ್ನಿಸಿದರು.

ತಾಲ್ಲೂಕಿನ ಬೆಟ್ಟಪ್ಪನಹಳ್ಳಿಯಲ್ಲಿ ನಡೆದ ಚಂಗಾವರ ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಧ್ಯಾ ಸುರಕ್ಷಾ ಯೋಜನೆಯ ಪಿಂಚಣಿ ಮೊತ್ತ ₹ 2,000, ವಿಧವಾ ವೇತನ ₹ 1,500 ಹಾಗೂ ಅಂಗವಿಕಲರಿಗೆ ₹ 2,000 ನೀಡಲಾಗುವುದು ಎಂದರು.

ADVERTISEMENT

ಮುಖಂಡ ಶ್ರೀನಿವಾಸ್ ಬಾಬು ಮಾತನಾಡಿ, ‘ಜಯಚಂದ್ರ ಶಾಸಕರಾಗಿದ್ದ ಸಮಯದಲ್ಲಿ ಕಾಡುಗೊಲ್ಲ ಸಮುದಾಯದ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಒಂದು ಎಕರೆ ಜಮೀನನ್ನು ಮಂಜೂರು ಮಾಡಿಸಿ ₹ 75 ಲಕ್ಷ ಅನುದಾನ ನೀಡಿದ್ದರು. ಅಲ್ಲದೇ, ಗೊಲ್ಲರಹಟ್ಟಿಗಳನ್ನು ಕಂದಾಯ ಗ್ರಾಮ ಮಾಡಲು ಶ್ರಮ ಹಾಕಿದ್ದನ್ನು ಮರೆಯಬಾರದು’ ಎಂದು ಹೇಳಿದರು.

ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್, ಕೆಪಿಸಿಸಿ ಸದಸ್ಯ ಟಿ. ಲೋಕೇಶ್, ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್, ಎಸ್.ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಬಾಬು, ಚಂಗಾವರ ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ, ಸದಸ್ಯರಾದ ಬೊಮ್ಮಕ್ಕ, ಶಂಕರೇಗೌಡ, ಭೂತಮ್ಮ, ನಾಗರಾಜ್, ಮುಖಂಡರಾದ ಕರಿಯಣ್ಣ, ಜಯಪ್ರಕಾಶ್, ಬಾಬಣ್ಣ, ಕೃಷ್ಣಪ್ಪ, ನಾಗಮ್ಮ, ಸಂತೋಷ್, ಹನುಮಂತರಾಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.