ADVERTISEMENT

ತೋವಿನಕೆರೆ | ಸಿದ್ಧರಬೆಟ್ಟದಲ್ಲಿ ಬೆಳದಿಂಗಳ ಕೂಟ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2024, 6:59 IST
Last Updated 27 ಮಾರ್ಚ್ 2024, 6:59 IST
ತೋವಿನಕೆರೆ ಸಮೀಪದ ಸಿದ್ಧರಬೆಟ್ಟ ರಂಭಾಪುರಿ ಮಠದಲ್ಲಿ ನಡೆದ ಬೆಳದಿಂಗಳ ಕೂಟದಲ್ಲಿ ಹೈನು ಉದ್ಯಮಿ ಎ.ಎನ್. ರಾಜೇಶ್ವರಿ ಅವರನ್ನು ಸತ್ಕರಿಸಲಾಯಿತು
ತೋವಿನಕೆರೆ ಸಮೀಪದ ಸಿದ್ಧರಬೆಟ್ಟ ರಂಭಾಪುರಿ ಮಠದಲ್ಲಿ ನಡೆದ ಬೆಳದಿಂಗಳ ಕೂಟದಲ್ಲಿ ಹೈನು ಉದ್ಯಮಿ ಎ.ಎನ್. ರಾಜೇಶ್ವರಿ ಅವರನ್ನು ಸತ್ಕರಿಸಲಾಯಿತು   

ತೋವಿನಕೆರೆ: ನೂರಾರು ಸ್ವಾಮೀಜಿಗಳು ಕನ್ನೇರಿ ಮಠದ ಸ್ವಾಮೀಜಿ ಮಾರ್ಗದರ್ಶನದಲ್ಲಿ ಸಭೆ ನಡೆಸಿದ್ದು, ಮುಂದಿನ ದಿನಗಳಲ್ಲಿ ರೈತರ ಕಷ್ಟಗಳ ಪರಿಹಾರಕ್ಕೆ ‘ನೇಗಿಲ ಯೋಗಿ’ಗೆ ಸಹಕಾರ ನೀಡಲು ತೀರ್ಮಾನಿಸಲಾಗಿದೆ ಎಂದು ಸಿದ್ಧರಬೆಟ್ಟದ ರಂಭಾಪುರಿ ಮಠದ ಪೀಠಾದ್ಯಕ್ಷ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ಸಿದ್ಧರಬೆಟ್ಟ ರಂಭಾಪುರಿ ಶಾಖಾ ಮಠದ ಅವರಣದಲ್ಲಿ ಸೋಮವಾರ ನಡೆದ ಬೆಳದಿಂಗಳ ಕೂಟದಲ್ಲಿ ಅವರು ಮಾತನಾಡಿದರು.

ಮಠಗಳಲ್ಲಿ ಗಾಣದ ಯಂತ್ರ ಹಾಕಿ ಶುದ್ಧ ಎಣ್ಣೆ ತೆಗೆಯುವುದು, ಸಾವಯವ ಮಳಿಗೆ ಸ್ಥಾಪಿಸಿ ರಾಸಾಯನಿಕ ರಹಿತ ಕೃಷಿ ಉತ್ಪನ್ನ ಮಾರಾಟ ಮಾಡಲಾಗುತ್ತದೆ. ಸ್ಥಳೀಯ ರೈತರಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ನಬಾರ್ಡ್‌ ಸಹಾಯಕ ಜನರಲ್ ಮ್ಯಾನೇಜರ್ ಕೀರ್ತಿ ಪ್ರಭ ಅವರು ‘ಕೃಷಿ ಉದ್ಯಮಿಯಾಗಿ ಮಹಿಳೆ’ ವಿಷಯದ ಬಗ್ಗೆ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾಭಿವೃದ್ಧಿಗೆ ನಬಾರ್ಡ್ ಮೂಲಕ ದೊರೆಯುವ ಸರ್ಕಾರದ ಯೋಜನೆಗಳ ವಿವರ ನೀಡಿದರು.

ಹೈನು ಉದ್ಯಮಿ ಮಣುವಿನಕುರಿಕೆ ಎ.ಎನ್.ರಾಜೇಶ್ವರಿ ದಂಪತಿಯನ್ನು ಸತ್ಕರಿಸಲಾಯಿತು.

ರಾಜೇಶ್ವರಿ ಮಾತನಾಡಿ, ಎರಡು ಹಸುಗಳಿಂದ ಪ್ರಾರಂಭವಾಗಿ ಈಗ 45ಕ್ಕೆ ಏರಿದ್ದು, ಯಶ್ವಸಿ ಹೈನುಗಾರಿಕೆ ಮಾರ್ಗಗಳ ಮಾಹಿತಿ ನೀಡಿದರು.

ಮಧುಗಿರಿ ಪುಟ್ಟಮ್ಮ, ಎಚ್.ಪಿ. ಪ್ರಶಾಂತ ಕುಮಾರ್, ರೇಖಾ ಗೌ.ರಾ.ರಾಮಮೂರ್ತಿ ಉಪಸ್ಥಿತರಿದ್ದರು.

ಮಣುವಿನಕುರಿಕೆ ಸವಿತಾ ನಾಗೇಶ್, ಜೋನಿಗರಹಳ್ಳಿ ಮಮತಾ, ತೋವಿನಕೆರೆ ಸ್ವರೂಪ್ ಮಂಜುನಾಥ, ಮಂಜಮ್ಮ, ಗೌರಗೊಂಡನಹಳ್ಳಿ ಪೂರ್ವಿಕ್ ಜಿ.ಆರ್. ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.