ADVERTISEMENT

ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿ: ಮೈಸೂರು ಸೆಮಿಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 6:25 IST
Last Updated 19 ಜನವರಿ 2026, 6:25 IST
ತುಮಕೂರಿನಲ್ಲಿ ಭಾನುವಾರ ಶಿವಮೊಗ್ಗ ಮತ್ತು ಬೆಳಗಾವಿ ಮಧ್ಯೆ ಫುಟ್‌ಬಾಲ್‌ ಪಂದ್ಯ ನಡೆಯಿತು
ಚಿತ್ರಗಳು: ಚಂದನ್‌
ತುಮಕೂರಿನಲ್ಲಿ ಭಾನುವಾರ ಶಿವಮೊಗ್ಗ ಮತ್ತು ಬೆಳಗಾವಿ ಮಧ್ಯೆ ಫುಟ್‌ಬಾಲ್‌ ಪಂದ್ಯ ನಡೆಯಿತು ಚಿತ್ರಗಳು: ಚಂದನ್‌   

ತುಮಕೂರು: ರಾಜ್ಯ ಒಲಿಂಪಿಕ್ಸ್‌ ಕ್ರೀಡಾಕೂಟದ ಫುಟ್‌ಬಾಲ್‌ ಪಂದ್ಯಾವಳಿಯಲ್ಲಿ ಮೈಸೂರು ತಂಡ ಸೆಮಿಫೈನಲ್‌ ಪ್ರವೇಶಿಸಿದೆ.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಶಿವಮೊಗ್ಗದ ವಿರುದ್ಧ 3-0 ಗೋಲುಗಳಿಂದ ಗೆಲವು ದಾಖಲಿಸಿತು. ಬಿ ಗುಂಪಿನಿಂದ ಮೊದಲ ತಂಡವಾಗಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಎ–ಗುಂಪಿನಿಂದ ಕೊಡಗು ಮತ್ತು ಉತ್ತರ ಕನ್ನಡ ತಂಡಗಳು ಸೆಮಿಫೈನಲ್‌ ಪ್ರವೇಶಿಸಿವೆ.

ವಾಲಿಬಾಲ್‌ ಪುರುಷರ ವಿಭಾಗದಲ್ಲಿ ತುಮಕೂರಿನ ತಂಡ ಶುಭಾರಂಭ ಮಾಡಿದೆ. ಶನಿವಾರ ಸಂಜೆ ನಡೆದ ಪಂದ್ಯದಲ್ಲಿ ಬೆಂಗಳೂರು ವಿರುದ್ಧ 3–0 ಅಂಕಗಳಿಂದ ಗೆಲುವು ಸಾಧಿಸಿದೆ. ಭಾನುವಾರ ಮಹಿಳೆಯರ ವಿಭಾಗದ 3, ಪುರುಷರ ವಿಭಾಗದ 3 ಸೇರಿ ಒಟ್ಟು 6 ಪಂದ್ಯಗಳು ನಡೆದವು. ಸೋಮವಾರ ಲೀಗ್‌ ಪಂದ್ಯಗಳು ಮುಗಿಯಲಿವೆ. ಮಂಗಳವಾರ ಫೈನಲ್‌ ಪಂದ್ಯಕ್ಕೆ ಮೈದಾನ ಸಿದ್ಧಗೊಳ್ಳಲಿದೆ.

ADVERTISEMENT

ನಗರದ ಜೂನಿಯರ್‌ ಕಾಲೇಜು ಮೈದಾನದಲ್ಲಿ ಕಳೆದ ಎರಡು ದಿನಗಳಿಂದ ಬಾಕ್ಸಿಂಗ್‌ ಸ್ಪರ್ಧೆ ಬಿರುಸು ಪಡೆದಿದ್ದು, ಸೋಮವಾರ ಅಂತಿಮ ಪಂದ್ಯಗಳು ನಡೆಯಲಿವೆ.

ಅಮಾನಿಕೆರೆಯಲ್ಲಿ ನಡೆದ ಕಯಾಕಿಂಗ್‌ ಸ್ಪರ್ಧೆ ಗಮನ ಸೆಳೆಯಿತು

ಇಂದಿನಿಂದ ಬ್ಯಾಸ್ಕೆಟ್‌ಬಾಲ್‌ ಶುರು: ರಾಜ್ಯ ಒಲಿಂಪಿಕ್ಸ್‌ ಅಂಗವಾಗಿ ನಗರ ಹೊರವಲಯದ ಸಿದ್ಧಾರ್ಥ ವೈದ್ಯಕೀಯ ಕಾಲೇಜು ಮೈದಾನದಲ್ಲಿ ಸೋಮವಾರದಿಂದ ಬ್ಯಾಸ್ಕೆಟ್‌ಬಾಲ್‌ ಪಂದ್ಯಾವಳಿ ಆರಂಭವಾಗಲಿದೆ. ಬೆಳಿಗ್ಗೆ 7 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಟೂರ್ನಿಗೆ ಚಾಲನೆ ನೀಡಲಿದ್ದಾರೆ.

ತುಮಕೂರಿನಲ್ಲಿ ಭಾನುವಾರ ನಡೆದ ಬಾಕ್ಸಿಂಗ್‌ ಪಂದ್ಯದಲ್ಲಿ ಸ್ಪರ್ಧಿಗಳ ಪೈಪೋಟಿ
ವಾಲಿಬಾಲ್‌ ಪಂದ್ಯದಲ್ಲಿ ಅಂಕ ಗಳಿಸಲು ಸೆಣಸಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.