
ಪ್ರಜಾವಾಣಿ ವಾರ್ತೆ
ತುಮಕೂರು: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಾದ ತುಮಕೂರು– ತಿಪಟೂರು– ಅರಸೀಕೆರೆ ಹಾಗೂ ತುಮಕೂರು– ಯಶವಂತಪುರ– ಬಾಣಸವಾಡಿ ನಡುವೆ ಹೊಸದಾಗಿ ಪ್ಯಾಸೆಂಜರ್ ರೈಲು ಸಂಚಾರ ಜೂನ್ 20ರಿಂದ ಆರಂಭವಾಗಲಿದೆ.
ನವದೆಹಲಿಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷ ತ್ರಿಪಾಠಿ ಅವರನ್ನು ಸಂಸದ ಜಿ.ಎಸ್.ಬಸವರಾಜು ಭೇಟಿಮಾಡಿ ಚರ್ಚಿಸಿದ್ದಾರೆ.
ಹೊಸದಾಗಿ ಎರಡು ರೈಲುಗಳ ಸಂಚಾರ ಆರಂಭಿಸುವ ಭರವಸೆಯನ್ನು ರೈಲ್ವೆ ಮಂಡಳಿ ಅಧಿಕಾರಿಗಳು ನೀಡಿದ್ದಾರೆ. ಜೂನ್ 20ರಂದು ನಗರದ ರೈಲು ನಿಲ್ದಾಣದಲ್ಲಿ ನೂತನ ರೈಲುಗಳ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.