ADVERTISEMENT

ದೊಡ್ಡ ಅಗ್ರಹಾರ ಮದ್ಯ ಮಾರಾಟ ನಿಷೇಧಿತ ಗ್ರಾಮ

​ಪ್ರಜಾವಾಣಿ ವಾರ್ತೆ
Published 31 ಮೇ 2020, 16:35 IST
Last Updated 31 ಮೇ 2020, 16:35 IST
ಶಿರಾ ತಾಲ್ಲೂಕಿನ ದೊಡ್ಡ ಅಗ್ರಹಾರ ಗ್ರಾಮದಲ್ಲಿ ಭಾನುವಾರ ಮದ್ಯ ಮಾರಾಟ ನಿಷೇಧಿತ ಗ್ರಾಮ ಎಂದು ನಾಮಫಲಕ ಹಾಕಲಾಯಿತು. ಸಿಪಿಐ ಶಿವಕುಮಾರ್, ಪಿಎಸ್ಐ ಶ್ರೀನಿವಾಸ್, ಚನ್ನೇಗೌಡ, ಜೆ.ಎನ್.ರಾಜಸಿಂಹ, ಜಗನ್ನಾಥ್, ನಾಗೇಂದ್ರ, ಸತೀಶ್, ಆಕಾಶ್ ಇದ್ದರು
ಶಿರಾ ತಾಲ್ಲೂಕಿನ ದೊಡ್ಡ ಅಗ್ರಹಾರ ಗ್ರಾಮದಲ್ಲಿ ಭಾನುವಾರ ಮದ್ಯ ಮಾರಾಟ ನಿಷೇಧಿತ ಗ್ರಾಮ ಎಂದು ನಾಮಫಲಕ ಹಾಕಲಾಯಿತು. ಸಿಪಿಐ ಶಿವಕುಮಾರ್, ಪಿಎಸ್ಐ ಶ್ರೀನಿವಾಸ್, ಚನ್ನೇಗೌಡ, ಜೆ.ಎನ್.ರಾಜಸಿಂಹ, ಜಗನ್ನಾಥ್, ನಾಗೇಂದ್ರ, ಸತೀಶ್, ಆಕಾಶ್ ಇದ್ದರು   

ಶಿರಾ: ತಾಲ್ಲೂಕಿನ ದೊಡ್ಡ ಅಗ್ರಹಾರ ಗ್ರಾಮವನ್ನು ಮದ್ಯ ಮಾರಾಟ ನಿಷೇಧಿತ ಗ್ರಾಮ ಎಂದು ಪೊಲೀಸ್ ಇಲಾಖೆ ಘೋಷಣೆ ಮಾಡಿ ಭಾನುವಾರ ನಾಮಫಲಕ ಹಾಕಿತು.

ದೊಡ್ಡ ಅಗ್ರಹಾರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಹಲವಾರು ಬಾರಿ ಪೊಲೀಸರಿಗೆ ದೂರುಗಳು ಬಂದಿದ್ದವು. ಜೊತೆಗೆ ಅಕ್ರಮ ಮದ್ಯ ಮಾರಾಟದಿಂದಾಗಿ ಗ್ರಾಮದಲ್ಲಿ ನೆಮ್ಮದಿ ಹಾಳಾಗಿದ್ದು, ಹಲವಾರು ಯುವಕರು ಕುಡಿತದ ಚಟಕ್ಕೆ ಬಲಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಮೇ 7ರಂದು ಪೊಲೀಸರಿಗೆ ದೂರು ನೀಡಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಒತ್ತಾಯಿಸಿದ್ದರು.

ಸ್ಥಳಕ್ಕೆ ಭೇಟಿ ನೀಡಿದ್ದ ಇನ್‌ಸ್ಪೆಕ್ಟರ್ ಶಿವಕುಮಾರ್ ಹಾಗೂ ಅಬಕಾರಿ ಇನ್‌ಸ್ಪೆಕ್ಟರ್ ರವೀಂದ್ರ ಅವರು ಗ್ರಾಮಸ್ಥರ ಅಹವಾಲುಗಳನ್ನು ಕೇಳಿ ಮದ್ಯ ಮಾರಾಟ ನಿಷೇಧಿತ ಗ್ರಾಮ ಎಂದು ಘೋಷಿಸುವುದಾಗಿ ಭರವಸೆ ನೀಡಿದ್ದರು.

ADVERTISEMENT

ಮದ್ಯ ಮಾರಾಟ ನಿಷೇಧಿತ ಗ್ರಾಮ ನಾಮ ಫಲಕವನ್ನು ಅನಾವರಣ ಮಾಡಿ ಮಾತನಾಡಿದ ಸಿಪಿಐ ಶಿವಕುಮಾರ್, ಜನರಲ್ಲಿ ಮನಪರಿವರ್ತನೆ ಆದರೆ ಏನು ಬೇಕಾದರೂ ಸಹ ಸಾಧನೆ ಮಾಡಬಹುದು ಎನ್ನುವುದಕ್ಕೆ ಈ ಗ್ರಾಮವೇ ಉದಾಹರಣೆಯಾಗಿದೆ ಎಂದರು.

ಪಿಎಸ್ಐ ಶ್ರೀನಿವಾಸ್, ಮುಖಂಡ ದಾರ ಚನ್ನೇಗೌಡ, ದಲಿತ ಮುಖಂಡ ಜೆ.ಎನ್.ರಾಜಸಿಂಹ, ಜಗನ್ನಾಥ್, ನಾಗೇಂದ್ರ, ಸತೀಶ್, ಆಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.