ADVERTISEMENT

ಸೋಂಕು ಹೆಚ್ಚಾದರೆ ಅಧಿಕಾರಿಗಳೇ ಹೊಣೆ: ಸಚಿವ

​ಪ್ರಜಾವಾಣಿ ವಾರ್ತೆ
Published 16 ಜುಲೈ 2020, 17:42 IST
Last Updated 16 ಜುಲೈ 2020, 17:42 IST
ಸಚಿವ ಮಾಧುಸ್ವಾಮಿ‌
ಸಚಿವ ಮಾಧುಸ್ವಾಮಿ‌   

ತುರುವೇಕೆರೆ: ತಾಲ್ಲೂಕಿನ ಅಧಿಕಾರಿಗಳು ಕೊರೊನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನಿಮ್ಮನ್ನೆ ಹೊಣೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಎಚ್ಚರಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಕೊರೊನಾ ತಡೆ ಕುರಿತು ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಇಲ್ಲಿ 300ಕ್ಕೂ ಹೆಚ್ಚು ಹಾಸಿಗೆ ವ್ಯವಸ್ಥೆ ಮಾಡಿಕೊಳ್ಳಿ. ಮಾಯಸಂದ್ರ ಹಾಗೂ ದಂಡಿನಶಿವರದಲ್ಲಿಯೂ ತಲಾ 5 ಹಾಸಿಗೆ ವ್ಯವಸ್ಥೆ ಮಾಡಿಕೊಳ‍್ಳಿ ಎಂದರು.

ADVERTISEMENT

ಸಭೆಯಲ್ಲಿ ಶಾಸಕರಾದ ಮಸಾಲ ಜಯರಾಂ, ನಾಗೇಶ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‌ಪಿ ವಂಶಿಕೃಷ್ಣ, ಸಿಇಒ ಶುಭಾ ಕಲ್ಯಾಣ, ಉಪವಿಭಾಗಾಧಿಕಾರಿ ನಂದಿನಿ, ತಹಶೀಲ್ದಾರ್ ಆರ್.ನಯಿಂಉನ್ನಿಸಾ, ವೈಧ್ಯಾಧಿಕಾರಿ ಡಾ.ಶ್ರೀಧರ್, ಸುಪ್ರಿಯಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.