ADVERTISEMENT

ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಉಪ ವಿಭಾಗಾಧಿಕಾರಿ ಭೇಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 6:56 IST
Last Updated 25 ಫೆಬ್ರುವರಿ 2026, 6:56 IST
ಗುಬ್ಬಿ ತಾಲ್ಲೂಕು ಜಿ ಹರಿವೇಸಂದ್ರದಲ್ಲಿನ ಯೋಗಿತಾ ಮನೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ
ಗುಬ್ಬಿ ತಾಲ್ಲೂಕು ಜಿ ಹರಿವೇಸಂದ್ರದಲ್ಲಿನ ಯೋಗಿತಾ ಮನೆಗೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ   

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಜಿ.ಹರಿವೇಸಂದ್ರದಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ 10 ವರ್ಷದ ಯೋಗಿತಾ ಮನೆಗೆ ಮಂಗಳವಾರ ತುಮಕೂರು ಉಪ ವಿಭಾಗಾಧಿಕಾರಿ ನಹೀದಾ ಜಮ್ ಜಮ್ ಹಾಗೂ ಗುಬ್ಬಿ ತಹಶೀಲ್ದಾರ್ ಆರತಿ ಬಿ ಭೇಟಿ ನೀಡಿದರು.

ಆಧಾರ್ ಕಾರ್ಡ್‌ನಲ್ಲಿ ಯೋಗಿತಾಳ ಹೆಸರು ಇಂಗ್ಲಿಷ್‌ನಲ್ಲಿ ಮಾತ್ರ ಇರುವುದರಿಂದಾಗಿ ಪಡಿತರ ಚೀಟಿಗೆ ಹೆಸರು ಸೇರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಗಳಿಗೆ ಉಚಿತ ಚಿಕಿತ್ಸೆ ದೊರಕದಂತೆ ಆಗಿರುವ ವಿಚಾರ ಪತ್ರಿಕೆಗಳಲ್ಲಿ ಪ್ರಕಟವಾದ ನಂತರ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡಿದೆ.

ಅಧಿಕಾರಿಗಳ ತಂಡದೊಂದಿಗೆ ಬಾಲಕಿ ಯೋಗಿತಾ ಮನೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿ, ಆಧಾರ್ ಕಾರ್ಡ್ ಸಮಸ್ಯೆಯನ್ನು ಅರಿತು ತುರ್ತು ಕ್ರಮಕ್ಕೆ ಮುಂದಾದರು. ಸಮಸ್ಯೆಯನ್ನು ಅರಿತು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ತಾಂತ್ರಿಕ ತೊಂದರೆಯನ್ನು ಸ್ಥಳದಲ್ಲಿಯೇ ಸರಿಪಡಿಸಿ ಬಿಪಿಎಲ್ ಪಡಿತರ ಚೀಟಿಗೆ ಬಾಲಕಿಯ ಹೆಸರನ್ನು ಸೇರ್ಪಡೆಗೊಳಿಸಲು ಸೂಚಿಸಿದರು.

ADVERTISEMENT

ಗ್ರಾಮ ಆಡಳಿತಾಧಿಕಾರಿ ಸ್ವಾಮಿ, ಆಧಾರ್ ಕಾರ್ಡ್ ತಾಂತ್ರಿಕ ವಿಭಾಗದ ಮುಖ್ಯಸ್ಥ ಪ್ರಶಾಂತ್, ಗಂಗಾ, ಸಿಬ್ಬಂದಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.