ADVERTISEMENT

ಸಂಸ್ಕೃತ ಪರೀಕ್ಷೆ ಬರೆದ ಒಬ್ಬಳೇ ವಿದ್ಯಾರ್ಥಿನಿ; ಆರು ಮಂದಿ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2024, 13:19 IST
Last Updated 21 ಮಾರ್ಚ್ 2024, 13:19 IST
<div class="paragraphs"><p>ಪರೀಕ್ಷೆ–ಪ್ರಾತಿನಿಧಿಕ ಚಿತ್ರ</p></div>

ಪರೀಕ್ಷೆ–ಪ್ರಾತಿನಿಧಿಕ ಚಿತ್ರ

   

ಕುಣಿಗಲ್: ಪಟ್ಟಣದ ಮಹಾತ್ಮ ಗಾಂಧಿ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯು ಪರೀಕ್ಷಾ ಕೇಂದ್ರದಲ್ಲಿ ಗುರುವಾರ ನಡೆದ ಸಂಸ್ಕೃತ ಪರೀಕ್ಷೆಯನ್ನು ಒಬ್ಬಳೇ ವಿದ್ಯಾರ್ಥಿ ಬರೆದಿದ್ದು, ಆರು ಮಂದಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ವಿದ್ಯಾರ್ಥಿನಿ ಮಾನಸ ಪರೀಕ್ಷೆ ಬರೆದಿದ್ದು, ಈಕೆ ಬಿಜಿಎಸ್ ಕಾಲೇಜಿನ ವಿದ್ಯಾರ್ಥಿನಿ. ಪ್ರಥಮ ಭಾಷೆಯಾಗಿ ಸಂಸ್ಕೃತ ಆಯ್ಕೆಮಾಡಿಕೊಂಡಿದ್ದರು.

ADVERTISEMENT

ಮಹಾತ್ಮಗಾಂಧಿ ಪದವಿಪೂರ್ವ ಕಾಲೇಜಿನ 26 ವಿದ್ಯಾರ್ಥಿಗಳು ಸಂಸ್ಕ್ರತ ಭಾಷೆ ಪರೀಕ್ಷೆಯನ್ನು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಕೇಂದ್ರದಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.