ಪಾವಗಡ: ಆಪರೇಷನ್ ಸಿಂಧೂರ ಮೂಲಕ ಪಾಕಿಸ್ತಾನ ಮೇಲೆ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದಿಂದ ಪಟ್ಟಣದಲ್ಲಿ ಸಂಭ್ರಮಾಚರಣೆ ನಡೆಯಿತು.
ಬಿಜೆಪಿ ಮುಖಂಡ ನಾಗೇಂದ್ರ ಕುಮಾರ್, ಈ ಹಿಂದೆ ಪಾಕಿಸ್ತಾನ ಉಗ್ರವಾದವನ್ನು ಬೆಂಬಲಿಸುತ್ತಾ ದೇಶಕ್ಕೆ ತೊಂದರೆ ಕೊಡುತ್ತಾ ಬಂದಿದೆ. ಇದೀಗ ಮೋದಿ ಸರ್ಕಾರ ಪಾಕಿಸ್ತಾನ, ಉಗ್ರಗಾಮಿಗಳಿಗೆ ಸರಿಯಾದ ಪಾಠ ಕಲಿಸಿದೆ ಎಂದು ತಿಳಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಅಶೋಕ್, ಪಹಲ್ಗಾಮ್‌ನಲ್ಲಿ 27 ಜನರ ಹತ್ಯೆ ಮಾಡಿದ ಉಗ್ರವಾದಿಗಳಿಗೆ ಅವರ ರೀತಿಯಲ್ಲಿಯೇ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದೆ ಎಂದು ತಿಳಿಸಿದರು.
ಪಟಾಕಿ ಸಿಡಿಸಿ ಸಂಭ್ರಮಿಸಿದ ಸಾರ್ವಜನಿಕರು: ಬುಧವಾರ ಸಂಜೆ ಪಟ್ಟಣದಲ್ಲಿ ಹಿಂದುತ್ವಪರ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಿಸಿದವು.
ಬಿಜೆಪಿ ತಾಲ್ಲೂಕು ಘಟಕದ ಪದಾಧಿಕಾರಿ ಅಶೋಕ್, ನೇರಳೆಕುಂಟೆ ನಾಗೇಂದ್ರ ಕುಮಾರ್, ರವಿ, ಶ್ರೀರಾಮ ಸೇನೆ ಕಾವಲಗೇರಿ ರಾಮಾಂಜಿ, ಶ್ರೀರಾಮ್ ಗುಪ್ತ, ನಲಿಗಾನಹಳ್ಳಿ ಮಂಜುನಾಥ್ ರಾಕೇಶ್, ಹನುಮಂತರೆಡ್ಡಿ ,ಮಂಜುನಾಥ್, ಗೊಲ್ಡನ್ ಮಂಜು, ಲೋಕೇಶ್ ದೇವರಾಜು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.