ADVERTISEMENT

ಮಧುಗಿರಿ: ಖಾಸಗೀಕರಣಕ್ಕೆ ಎಲ್‌ಐಸಿ ಏಜೆಂಟರ ವಿರೋಧ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 3:21 IST
Last Updated 24 ಮಾರ್ಚ್ 2021, 3:21 IST
ಎಲ್‌ಐಸಿ ಖಾಸಗೀಕರಣ ವಿರೋಧಿಸಿ ಮಧುಗಿರಿಯಲ್ಲಿ ಎಲ್ಐಸಿ ಏಜೆಂಟರು ಮುಖ್ಯ ಶಾಖಾಧಿಕಾರಿ ಸುಬ್ಬಣ್ಣಚಾರ್ ಅವರಿಗೆ ಮನವಿ ಸಲ್ಲಿಸಿದರು
ಎಲ್‌ಐಸಿ ಖಾಸಗೀಕರಣ ವಿರೋಧಿಸಿ ಮಧುಗಿರಿಯಲ್ಲಿ ಎಲ್ಐಸಿ ಏಜೆಂಟರು ಮುಖ್ಯ ಶಾಖಾಧಿಕಾರಿ ಸುಬ್ಬಣ್ಣಚಾರ್ ಅವರಿಗೆ ಮನವಿ ಸಲ್ಲಿಸಿದರು   

ಮಧುಗಿರಿ: ಭಾರತೀಯ ಜೀವಾ ವಿಮಾ ನಿಗಮವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಧುಗಿರಿ ಶಾಖೆಯ ಜೀವ ವಿಮಾ ಪ್ರತಿನಿಧಿಗಳು ಶಾಖೆಯ ಮುಂಭಾಗ ಸೋಮವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿ ಲಾಭದಲ್ಲಿರುವ ಎಲ್‌ಐಸಿ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸರಿಯಾದ ಕ್ರಮವಲ್ಲ. ಖಾಸಗೀಕರಣವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಆಗ್ರಹಿಸಿದರು.

ಗ್ರಾಹಕರಿಗೆ ಹೆಚ್ಚಿನ ಬೋನಸ್ ನೀಡಬೇಕು, ಪಾಲಿಸಿಯ ಪ್ರೀಮಿಯಂ ಮತ್ತು ಬಡ್ಡಿಯ ಮೇಲೆ ಜಿಎಸ್‌ಟಿ ವಿಧಿಸುತ್ತಿರುವುದನ್ನು ತಕ್ಷಣ ಕೈಬಿಡಬೇಕು. ಎಲ್‌ಐಸಿ ಏಜಂಟರಿಗೆ ಮೆಡಿಕಲ್ ಕ್ಲೈಂ ನೀಡಬೇಕು ಹಾಗೂ ಏಜಂಟರಿಗೆ ನೀಡುತ್ತಿರುವ ಗ್ರಾಜಿಟಿಯನ್ನು ಹೆಚ್ಚಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಎಲ್‌ಐಸಿ ಮುಖ್ಯ ಶಾಖಾಧಿಕಾರಿ ಸುಬ್ಬಣ್ಣಚಾರ್ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಎಲ್‌ಐಸಿ ಸಂಘದ ಅಧ್ಯಕ್ಷ ಬಿ.ಪಿ.ವೆಂಕಟೇಶಯ್ಯ, ಕಾರ್ಯದರ್ಶಿ ಸಿದ್ದರಾಜು, ವಿಭಾಗೀಯ ಪ್ರತಿನಿಧಿ ಟಿ.ಜಿ.ಶ್ರೀನಿವಾಸ್, ಖಜಾಂಚಿ ಕರಿಯಣ್ಣ, ಮಾಜಿ ಅಧ್ಯಕ್ಷ ಮಾಲಿಮರಿಯಪ್ಪ, ಪದಾಧಿಗಳಾದ ಬೇಡತ್ತೂರು ಶಿವಣ್ಣ, ಮಲೆರಂಗಪ್ಪ, ಟಿ.ತಿಮ್ಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.