ADVERTISEMENT

ತುಮಕೂರು: ಕಾರ್ಮಿಕ ಸಂಹಿತೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2026, 6:47 IST
Last Updated 4 ಮಾರ್ಚ್ 2026, 6:47 IST
ತುಮಕೂರಿನಲ್ಲಿ ಮಂಗಳವಾರ ಕಾರ್ಮಿಕ ಸಂಹಿತೆ ವಿರೋಧಿಸಿ ಸಿಐಟಿಯು ಮತ್ತು ಸಂಯೋಜಿತ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು
ತುಮಕೂರಿನಲ್ಲಿ ಮಂಗಳವಾರ ಕಾರ್ಮಿಕ ಸಂಹಿತೆ ವಿರೋಧಿಸಿ ಸಿಐಟಿಯು ಮತ್ತು ಸಂಯೋಜಿತ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು   

ತುಮಕೂರು: ರಾಜ್ಯ ಸರ್ಕಾರ ನೂತನ ಕಾರ್ಮಿಕ ಸಂಹಿತೆ ಜಾರಿ ಮಾಡಬಾರದು. ಸಂವಿಧಾನ ಹಕ್ಕು ಚಲಾಯಿಸಿ, ಕಾರ್ಮಿಕರ ಹಕ್ಕು ಉಳಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಮತ್ತು ಸಂಯೋಜಿತ ಸಂಘಟನೆಗಳಿಂದ ನಗರದ ಕಾರ್ಮಿಕ ಇಲಾಖೆ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು.

ಹನುಮಂತಪುರದ ಕೊಲ್ಲಾಪುರದಮ್ಮ ದೇವಸ್ಥಾನದಿಂದ ಕಾರ್ಮಿಕ ಇಲಾಖೆ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು. ಕಾರ್ಮಿಕ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು.

‘ಕಾರ್ಮಿಕ ಹಕ್ಕು ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹೊಸ ಕಾರ್ಮಿಕ ಸಂಹಿತೆ ಜಾರಿಗೊಳಿಸಬಾರದು’ ಎಂದು ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್‌ ಮುಜೀಬ್‌ ಒತ್ತಾಯಿಸಿದರು.

ADVERTISEMENT

ಸಿಐಟಿಯು ಜಿಲ್ಲಾ ಖಜಾಂಚಿ ಲೋಕೇಶ್‌, ‘ರಾಜ್ಯ ಸರ್ಕಾರ ಕೂಡಲೇ ₹41 ಸಾವಿರ ಕನಿಷ್ಠ ಕೂಲಿ ನಿಗದಿ ಪಡಿಸಬೇಕು. ಕಾರ್ಮಿಕರ ಬದುಕಿಗೆ ಭದ್ರತೆ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್‌.ಕೆ.ಸುಬ್ರಹ್ಮಣ್ಯ, ವಿವಿಧ ಸಂಘಟನೆಗಳ ಮುಖಂಡರಾದ ಅನಸೂಯ, ಗುಲ್ಜಾರ್‌ ಬಾನು, ಗೌರಮ್ಮ, ಜಬೀನಾ ಬಾನು, ಶಂಕರಪ್ಪ, ಇಬ್ರಾಹಿಂ ಖಲೀಲ್‌, ರಂಗಧಾಮಯ್ಯ, ಸುಜಿತ್‌ ನಾಯಕ, ಮಧುಸೂದನ್‌, ಉಮೇಶ್, ಶಶಿಕಿರಣ್‌, ಚೇತನ್‌, ದೀಪಕ್‌, ತಿಪ್ಪೇಸ್ವಾಮಿ, ನಾಗಭೂಷಣ್‌, ಮುನಾಫ್, ಮಂಜು, ಕೆಂಪರಾಜು, ಮೀನಾಕ್ಷಿ, ಟಿ.ಎಸ್‌.ಭೀಮರಾಜು, ಅಶ್ವತ್ಥಯ್ಯ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.