ADVERTISEMENT

ನೌಕರರ ಸೇವೆ ಮುಂದುವರಿಸಿ: ಸರ್ಕಾರಿ ಆಸ್ಪತ್ರೆ ಹೊರಗುತ್ತಿಗೆ ಸಿಬ್ಬಂದಿಯಿಂದ ಮನವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2019, 12:13 IST
Last Updated 26 ಏಪ್ರಿಲ್ 2019, 12:13 IST
ಪಾವಗಡ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಶುಶೃಷಕಿ, ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರೆಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನೌಕರರು ತಹಶೀಲ್ದಾರ್ ಪಿ.ಎಸ್. ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.
ಪಾವಗಡ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ ಶುಶೃಷಕಿ, ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರೆಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನೌಕರರು ತಹಶೀಲ್ದಾರ್ ಪಿ.ಎಸ್. ಕುಂಬಾರ ಅವರಿಗೆ ಮನವಿ ಸಲ್ಲಿಸಿದರು.   

ಪಾವಗಡ: ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ಶುಶ್ರೂಷಕಿ ಹಾಗೂ ಕಿರಿಯ ಮಹಿಳಾ ಸಹಾಯಕಿಯರ ಸೇವೆ ಮುಂದುವರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ನೌಕರರು ತಹಶೀಲ್ದಾರ್, ತಾಲ್ಲೂಕು ಆರೋಗ್ಯ ಅಧಿಕಾರಿಗೆ ಮನವಿ ಸಲ್ಲಿಸಿದರು.

ಒಂದು ವರ್ಷದಿಂದ ಹೊರಗುತ್ತಿಗೆ ಆಧಾರರದಲ್ಲಿ ಸುಮಾರು 40 ಮಂದಿ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಏಕಾಏಕಿ ಕೆಲಸಕ್ಕೆ ಬರದಂತೆ ತಾಲ್ಲೂಕು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ. ಇದೇ ಕೆಲಸ ನೆಚ್ಚಿಕೊಂಡಿರುವವರಿಗೆ ದಿಕ್ಕು ತೋಚದಂತಾಗಿದೆ ಎಂದು ನೌಕರರು ಸಮಸ್ಯೆ ಹೇಳಿಕೊಂಡರು.

ರಾಜ್ಯದ ಇತರೆಡೆ ಹೊರಗುತ್ತಿಗೆ ನೌಕರರ ಸೇವೆ ಮುಂದುವರಿಸಲಾಗಿದೆ. ಆದರೆ, ತಾಲ್ಲೂಕಿನಲ್ಲಿ ಕೆಲವರನ್ನು ಮಾತ್ರ ಸೇವೆಯಲ್ಲಿ ಮುಂದುವರಿಯುವಂತೆ ತಿಳಿಸಿದ್ದಾರೆ. ಮುಂದಿನ ಆದೇಶ ಬಂದ ನಂತರ ಸೇವೆಗೆ ತೆಗೆದುಕೊಳ್ಳಲಾಗುವುದು. ಆದರೆ ಹಾಲಿ ಕರ್ತವ್ಯ ನಿರ್ವಹಿಸುವವರನ್ನೇ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಭರವಸೆ ನೀಡಲು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈವರೆಗೆ ಸೇವೆ ಸಲ್ಲಿಸಿದವರ ಪಿ.ಎಫ್, ಇ– ಜಿಐಎಸ್ ಇತ್ಯಾದಿ ಮಾಹಿತಿಯನ್ನೂ ನೌಕರರಿಗೆ ನೀಡಿಲ್ಲ ಎಂದು ನೌಕರರು ಆರೋಪಿಸಿದರು.

ADVERTISEMENT

ಹೊರಗುತ್ತಿಗೆಗೆ ಬದಲಾಗಿ ಗುತ್ತಿಗೆ ಆಧಾರದಲ್ಲಿ ಸೇವೆಗೆ ನಿಯೋಜನೆಗೊಳಿಸಬೇಕು. ನೌಕರರ ಪಿ.ಎಫ್, ಇಜಿಐಎಸ್ ಕಟಾವಣೆ ಮಾಹಿತಿ ನೀಡಬೇಕು. ಪ್ರತಿ ತಿಂಗಳು ವೇತನ ನೀಡಬೇಕು. ಈವರೆಗೆ ಕಾರ್ಯ ನಿರ್ವಹಿಸಿದವರ ಸೇವೆಯನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ತಹಶೀಲ್ದಾರ್ ಪಿ.ಎಸ್. ಕುಂಬಾರ, ತಾಲ್ಲೂಕು ವೈದ್ಯಾಧಿಕಾರಿ ರಾಮಾಂಜಿನೇಯ ಅವರಿಗೆ ಮನವಿ ಸಲ್ಲಿಸಿದರು.

ಹೊರಗುತ್ತಿಗೆ ನೌಕರರಾದ ಜ್ಯೋತಿ ನಾಯಕ, ಶ್ರೀದೇವಿ, ಮಮತಾ, ವೀಣಾ, ಶಿಲ್ಪಾ, ಜ್ಯೋತಿ, ಶ್ವೇತಾ, ನಾಗಮಣಿ, ಲಲಿತಮ್ಮ, ವನಜಾಕ್ಷಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.