ADVERTISEMENT

ಮಾಸಾಶನ ತಾರತಮ್ಯ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 5:40 IST
Last Updated 11 ನವೆಂಬರ್ 2020, 5:40 IST
ಕೊಡಿಗೇನಹಳ್ಳಿ ಹೋಬಳಿ ಕಲಿದೇವಪುರ ಗ್ರಾಮದಲ್ಲಿ ಪಿಂಚಣಿದಾರರ ಪ್ರತಿಭಟನೆ ನಡೆಸಿದರು
ಕೊಡಿಗೇನಹಳ್ಳಿ ಹೋಬಳಿ ಕಲಿದೇವಪುರ ಗ್ರಾಮದಲ್ಲಿ ಪಿಂಚಣಿದಾರರ ಪ್ರತಿಭಟನೆ ನಡೆಸಿದರು   

ಕೊಡಿಗೇನಹಳ್ಳಿ: ಹಳೇ ಪಿಂಚಣಿದಾರರಿಗೆ ₹600 ಹಾಗೂ ಹೊಸಬರಿಗೆ ₹ 1,000 ಮಾಸಾಶನ ನೀಡುವ ಮೂಲಕ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಮಂಗಳವಾರ ಕಲಿದೇವಪುರ ಗ್ರಾಮದ ವೃದ್ಧಾಪ್ಯ ಹಾಗೂ ವಿಧವಾ ವೇತನ ಫಲಾನುಭವಿಗಳು ಪ್ರತಿಭಟನೆ ನಡೆಸಿದರು.

ಗ್ರಾಮದಲ್ಲಿ ಮಾಸಾಶನ ಪಡೆಯುತ್ತಿರುವ ಅನೇಕರಿಗೆ ಹಲವು ವರ್ಷಗಳಿಂದ ಕೇವಲ ₹600 ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಮಾಸಾಶನ ಪಡೆಯುವವರಿಗೆ ಮಾತ್ರ
₹1,000 ಬರುತ್ತಿದೆ ಎಂದರು.

ಈ ಭಾಗ ಹಿಂದುಳಿದ ಪ್ರದೇಶವಾಗಿದ್ದು, ಇಲ್ಲಿನ ಜನರಿಗೆ ಮಳೆಗಾಲದಲ್ಲಿ ಬಿತ್ತನೆ, ಕಳೆ ತೆಗೆಯುವುದು ಮತ್ತು ಕಟಾವು ಸಮಯದಲ್ಲಿ ಕೆಲಸ ಕಾರ್ಯಗಳನ್ನು ಬಿಟ್ಟರೆ ಬೇರೆ ಯಾವುದೇ ಕೆಲಸ ದೊರೆಯುವುದಿಲ್ಲ. ಸರ್ಕಾರದಿಂದ ಬರುವ ₹ 600 ಆಧಾರವಾಗಿದ್ದು, ಅದು ಸಾಲುತ್ತಿಲ್ಲ ಎಂದರು.
ಹೊಸ ಪಿಂಚಣಿದಾರರಿಗೆ ನೀಡುವಂತೆ ಎಲ್ಲರಿಗೂ ₹1,000 ನೀಡಬೇಕು ಎಂದು ಒತ್ತಾಯಿಸಿದರು.

ADVERTISEMENT

ಅಶ್ವತ್ಥಮ್ಮ, ಗಂಗರತ್ನಮ್ಮ, ನರಸಮ್ಮ, ಚಿನ್ನಮ್ಮ, ಲಕ್ಷ್ಮಮ್ಮ, ಗಂಗಮ್ಮ, ಚಿಕ್ಕರಂಗಮ್ಮ, ಎನ್. ಅಶ್ವತ್ಥಮ್ಮ, ಲಕ್ಷ್ಮೀನರಸಮ್ಮ, ಟಿ. ನರಸಮ್ಮ, ಆರ್. ಗಂಗಮ್ಮ, ಎನ್. ನರಸಮ್ಮ, ರತ್ನಮ್ಮ, ನಾಗಮ್ಮ, ರತ್ನಮ್ಮ ಹನುಮಂತರೆಡ್ಡಿ, ನಾಗರತ್ನಮ್ಮ, ದೊಡ್ಡಕ್ಕ, ಮಂಜಮ್ಮ, ಯಶೋಧಮ್ಮ, ವೆಂಕಟಲಕ್ಷ್ಮಮ್ಮ, ಹನುಮಕ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.