ತುಮಕೂರು: ಸಾಮಾಜಿಕ ಭದ್ರತಾ ಯೋಜನೆಯಡಿ ಜಿಲ್ಲೆಯ ವಿವಿಧ ಹೋಬಳಿಗಳಲ್ಲಿ ಫೆ. 1ರಿಂದ 26ರ ವರೆಗೆ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‍ನಲ್ಲಿ 1,214 ಜನರಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಗಿದೆ.
39 ಹೋಬಳಿಗಳಲ್ಲಿ ಅದಾಲತ್ ನಡೆದಿತ್ತು. ಇದರಲ್ಲಿ ಒಟ್ಟು 1,219 ಅರ್ಜಿಗಳು ಸ್ವೀಕೃತವಾಗಿದ್ದವು. ಸೂಕ್ತ ದಾಖಲೆಗಳಿಲ್ಲದ ಕಾರಣ 5 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.
ಶಿರಾ ತಾಲ್ಲೂಕಿನಲ್ಲಿ 341, ಮಧುಗಿರಿ 185, ತುರುವೇಕೆರೆ 36, ತುಮಕೂರು 291, ಚಿಕ್ಕನಾಯಕನಹಳ್ಳಿ 53, ಕುಣಿಗಲ್ 53, ತಿಪಟೂರು 66, ಕೊರಟಗೆರೆ 65, ಪಾವಗಡ 29, ಗುಬ್ಬಿ ತಾಲ್ಲೂಕಿನಲ್ಲಿ 95 ಸೇರಿದಂತೆ ಒಟ್ಟು 1,214 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.