ADVERTISEMENT

ನಾಳೆಯಿಂದ ವೈಜ್ಞಾನಿಕ ಆವಿಷ್ಕಾರಗಳ ಪ್ರದರ್ಶನ, ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 16:28 IST
Last Updated 24 ಏಪ್ರಿಲ್ 2019, 16:28 IST

ತುಮಕೂರು: 5ನೇ ರಾಜ್ಯ ಮಟ್ಟದ ವೈಜ್ಞಾನಿಕ ಆವಿಷ್ಕಾರಗಳ ಪ್ರದರ್ಶನ ಹಾಗೂ ಸ್ಪರ್ಧೆ ‘ಟೆಕ್ನೀಡಿಯಂ 2019’ ಕಾರ್ಯಕ್ರಮ ಏ.26 ಮತ್ತು ಏ.27 ರಂದು ನಗರದ ಮರಳೂರು ದಿಣ್ಣೆಯ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಯಲಿದೆ.

26 ರಂದು ಬೆಳಿಗ್ಗೆ 10ಕ್ಕೆ ವಿಷನ್ ಗ್ರೂಪ್ ಆನ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ವಿಜಿಎಸ್‌ಟಿ) ಮುಖ್ಯಸ್ಥ ಡಾ.ಎಸ್.ಜಿ ಶ್ರೀಕಂಠೇಶ್ವರ ಸ್ವಾಮಿ ಪ್ರದರ್ಶನ ಉದ್ಘಾಟಿಸುವರು. ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಕೆ.ವೀರಯ್ಯ ಅಧ್ಯಕ್ಷತೆವಹಿಸುವರು. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಭಾಗವಹಿಸುವರು.

27 ರಂದು ಸಮಾರೋಪ ನಡೆಯಲಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ 20 ಎಂಜಿನಿಯರಿಂಗ್‌ ಕಾಲೇಜಿನ ಎಲ್ಲ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸುವರು. ಹಾಬಿ, ಯುಜಿ, ಪಿಜಿ ಎನ್ನುವ ಮೂರು ಬಗೆಯ ಸ್ಪರ್ಧೆಯಲ್ಲಿ 250 ವಿವಿಧ ರೀತಿಯ ಮಾದರಿಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ ಎಂದು ಕಾರ್ಯಕ್ರಮದ ಸಂಯೋಜಕ ಡಾ.ಎಲ್.ಸಂಜೀವಕುಮಾರ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.