ADVERTISEMENT

ಮುಂದಿನ ವರ್ಷ ತತ್ವಜ್ಞಾನ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 5:09 IST
Last Updated 25 ನವೆಂಬರ್ 2025, 5:09 IST
ತುಮಕೂರಿನಲ್ಲಿ ಈಚೆಗೆ ತತ್ವಜ್ಞಾನ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಸತ್ಯನಾರಾಯಣಾಚಾರ್ಯ, ಜಿ.ಕೆ.ಶ್ರೀನಿವಾಸ್, ಶ್ರೀನಿವಾಸ ಹತ್ವಾರ್, ಹರೀಶ್, ಆನಂದಾಚಾರ್ಯ ಗುಮಾಸ್ತೆ, ಜನಾರ್ದನ ಭಟ್ಟ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಈಚೆಗೆ ತತ್ವಜ್ಞಾನ ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಸತ್ಯನಾರಾಯಣಾಚಾರ್ಯ, ಜಿ.ಕೆ.ಶ್ರೀನಿವಾಸ್, ಶ್ರೀನಿವಾಸ ಹತ್ವಾರ್, ಹರೀಶ್, ಆನಂದಾಚಾರ್ಯ ಗುಮಾಸ್ತೆ, ಜನಾರ್ದನ ಭಟ್ಟ ಇತರರು ಉಪಸ್ಥಿತರಿದ್ದರು   

ತುಮಕೂರು: ನಗರದ ಕೃಷ್ಣ ಮಂದಿರದಲ್ಲಿ ಮುಂದಿನ ವರ್ಷ ಅಖಿಲ ಭಾರತ ಮಟ್ಟದ ತತ್ವಜ್ಞಾನ ಸಮ್ಮೇಳನ ನಡೆಯಲಿದೆ. ಅದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ಈಚೆಗೆ ನಡೆಯಿತು.

ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ತತ್ತ್ವಜ್ಞಾನ ಸಮ್ಮೇಳನ ಹಾಗೂ ಶ್ರೀಮನ್ನ್ಯಾಯಸುಧಾ ಮಂಗಳ ಹಮ್ಮಿಕೊಳ್ಳಲಾಗಿದೆ.

ಪೂರ್ವಭಾವಿ ಸಭೆಯಲ್ಲಿ ವಿದ್ವಾಂಸ ಸತ್ಯನಾರಾಯಣಾಚಾರ್ಯ ಮಾತನಾಡಿ, ‘ವಿಶ್ವಗುರು ಮಧ್ವಾಚಾರ್ಯರ ಸಿದ್ಧಾಂತ ಒಂದು ಮತಕ್ಕೆ ಸೀಮಿತವಾಗಿಲ್ಲ. ಅದು ವಿಶ್ವಕ್ಕೆ ಮಾರ್ಗದರ್ಶಕವಾಗಿದೆ. ನಮ್ಮ ಋಷಿ ಪರಂಪರೆ ತಿಳಿದುಕೊಳ್ಳುವ, ಸನಾತನ ಸಂಸ್ಕೃತಿ ಬೆಳೆಸುವ ಮಹತ್ತ್ವದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಮುಂದಿನ ಜನಾಂಗಕ್ಕೆ ಸಂಸ್ಕೃತಿ ಉಳಿಸುವ ಜವಾಬ್ದಾರಿಯೂ ನಮ್ಮದಾಗಿದೆ’ ಎಂದು ಹೇಳಿದರು.

ADVERTISEMENT

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಧ್ವ ಮಹಾಮಂಡಲ ತುಮಕೂರು ಶಾಖೆ ಅಧ್ಯಕ್ಷ ಜಿ.ಕೆ.ಶ್ರೀನಿವಾಸ್ ಸಮ್ಮೇಳನದ ಬಗ್ಗೆ ಮಾಹಿತಿ ನೀಡಿದರು.

ಕೃಷ್ಣ ಮಂದಿರ ಅಧ್ಯಕ್ಷ ಶ್ರೀನಿವಾಸ ಹತ್ವಾರ್, ವಿದ್ವಾಂಸರಾದ ಆನಂದಾಚಾರ್ಯ ಗುಮಾಸ್ತೆ, ಜನಾರ್ದನ ಭಟ್ಟ, ಮಾಧ್ವ ಮಹಾಮಂಡಲ ಉಪಾಧ್ಯಕ್ಷ ಬಿ.ಎನ್.ವೇಣುಗೋಪಾಲ, ಕೆ.ವಿ.ಕುಮಾರ್, ಸಮಾಜದ ಮುಖಂಡರಾದ ನರಸಿಂಹರಾವ್, ಬ್ರಾಹ್ಮಣ ಸಂಘದ ಉಪಾಧ್ಯಕ್ಷ ಹರೀಶ್, ಮಂಡಲ ಕಾರ್ಯದರ್ಶಿಗಳಾದ ಗುರುಪ್ರಸಾದ್, ಹನುಮಂತಪುರ ರಾಯರ ಮಠದ ಹನುಮೇಶಾಚಾರ್ಯ, ಶೆಟ್ಟಿಹಳ್ಳಿ ರಸ್ತೆ ರಾಘವೇಂದ್ರ ಮಠದ ಸುಧೀಂದ್ರ, ಸಹ ಕಾರ್ಯದರ್ಶಿ ಪದ್ಮನಾಭ, ಜ್ಯೋತಿ ನರಸಿಂಹರಾವ್, ಸೌಭಾಗ್ಯ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.