ADVERTISEMENT

ಪೋಲೇನಹಳ್ಳಿ: ಅಸಮರ್ಪಕ ರಸ್ತೆಯಲ್ಲಿ ಸಂಚಾರ ಕಸರತ್ತು

​ಪ್ರಜಾವಾಣಿ ವಾರ್ತೆ
Published 31 ಮೇ 2025, 4:18 IST
Last Updated 31 ಮೇ 2025, 4:18 IST
ಪಾವಗಡ ತಾಲ್ಲೂಕು ಪೋಲೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ 
ಪಾವಗಡ ತಾಲ್ಲೂಕು ಪೋಲೇನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ    

ಪಾವಗಡ: ತಾಲ್ಲೂಕಿನ ವೈ.ಎನ್. ಹೊಸಕೋಟೆ ಹೋಬಳಿ ಪೋಲೆನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಗ್ರಾಮಕ್ಕೆ ಸಮರ್ಪಕ ರಸ್ತೆ ಇಲ್ಲದೆ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಗ್ರಾಮದಿಂದ ಕೆಂಚಮ್ಮನಹಳ್ಳಿ ರಸ್ತೆ ಹಾಗೂ ಸಾಸಲಕುಂಟೆಗೆ ಸಂಪರ್ಕ ಕಲ್ಪಿಸುವ ರಸ್ತೆ ಗುಂಡಿಗಳಿಂದ ಕೂಡಿವೆ. ಡಾಂಬರ್ ಕಿತ್ತು ಬಂದು ಬೃಹತ್ ಗುಂಡಿಗಳು ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಗ್ರಾಮಕ್ಕೆ ಬರಲು ಕಸರತ್ತು ನಡೆಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

ತುರ್ತು ಸ್ಥಿತಿಯಲ್ಲಿ ಗ್ರಾಮದಿಂದ ಆಸ್ಪತ್ರೆಗೆ ತೆರಳು ಹೆಚ್ಚು ಸಮಯ ಹಿಡಿಯುತ್ತದೆ. ರೋಗಿಗಳು, ವೃದ್ಧರನ್ನು ಈ ಮಾರ್ಗದ ಮೂಲಕ ಕರೆದೊಯ್ಯುವುದು ತ್ರಾಸದಾಯಕ. ಮಳೆಗಾಲದಲ್ಲಿ ಗುಂಡಿಗಳಲ್ಲಿ ನೀರು ತುಂಬಿರುತ್ತದೆ. ಗುಂಡಿ ಎಲ್ಲಿದೆ, ರಸ್ತೆ ಎಲ್ಲಿದೆ ಎಂದೂ ಗೊತ್ತಾಗದೆ ವಾಹನಗಳು ಅಪಘಾತವಾಗಿರುವ ಸಾಕಷ್ಟು ನಿದರ್ಶನಗಳಿವೆ.

ದ್ವಿಚಕ್ರ ವಾಹನ ಸವಾರರ ಪಾಡು ಹೇಳತೀರದು. ಗುಂಡಿ ತಪ್ಪಿಸಲು ಹೋಗಿ ಎದುರಗಡೆಯಿಂದ ಬರುವವರಿಗೆ ಡಿಕ್ಕಿ ಹೊಡೆದಿರುವ ನಿದರ್ಶನಗಳಿವೆ. ರಸ್ತೆ ಹದಗೆಟ್ಟ ಪರಿಣಾಮ ಸಾಕಷ್ಟು ಮಂದಿ ಅಪಘಾತಗಳಿಗೆ ಬಲಿಯಾಗಿದ್ದಾರೆ. ಎಷ್ಟೊ ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ಕೂಡಲೇ ರಸ್ತೆ ದುರಸ್ತಿ ಮಾಡಿಸಬೇಕು ಎಂದು ಪಿ.ಎನ್. ಶಾಂತಕುಮಾರ್, ಪಿ.ಈ. ಓಂಕಾರ್, ಪಿ.ಎಂ. ನಾಗರಾಜು, ಹನುಮಂತರಾಯ, ರಾಮಾಂಜಿನೇಯ ಒತ್ತಾಯಿಸಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.