ADVERTISEMENT

ದ್ಯಾಮಸಂದ್ರದಲ್ಲಿ ವಿದ್ಯುತ್ ಶಾರ್ಟ್ ಸರ್ಕೀ‌ಟ್‌: ತೆಂಗು, ಮಾವಿನ ಮರಗಳಿಗೆ ಹಾನಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2024, 14:15 IST
Last Updated 7 ಫೆಬ್ರುವರಿ 2024, 14:15 IST
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿ ದ್ಯಾಮಸಂದ್ರದಲ್ಲಿ ವಿದ್ಯುತ್‌ ಶಾರ್ಟ್ ಸರ್ಕೀಟ್‌ನಿಂದಾಗಿ ತೆಂಗು, ಮಾವು, ಹುಣಸೆ ಮತ್ತು ತೇಗದ ಮರಗಳು ಸುಟ್ಟುಹೋಗಿವೆ
ತುರುವೇಕೆರೆ ತಾಲ್ಲೂಕಿನ ದಂಡಿನಶಿವರ ಹೋಬಳಿ ದ್ಯಾಮಸಂದ್ರದಲ್ಲಿ ವಿದ್ಯುತ್‌ ಶಾರ್ಟ್ ಸರ್ಕೀಟ್‌ನಿಂದಾಗಿ ತೆಂಗು, ಮಾವು, ಹುಣಸೆ ಮತ್ತು ತೇಗದ ಮರಗಳು ಸುಟ್ಟುಹೋಗಿವೆ   

ತುರುವೇಕೆರೆ: ತಾಲ್ಲೂಕಿನ ದಂಡಿನಶಿವರ ಹೋಬಳಿಯ ದ್ಯಾಮಸಂದ್ರ ಗ್ರಾಮದ ಡಿ.ಎಸ್.ರಾಜಶೇಖರ್ ಅವರ ತೆಂಗಿನ ತೋಟದಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಯಿಂದಾಗಿ ಶಾರ್ಟ್ ಸರ್ಕೀಟ್ ಉಂಟಾಗಿ ತೆಂಗು, ಮಾವು, ಹುಣಸೆ ಮತ್ತು ತೇಗದ ಮರಗಳು ಸಂಪೂರ್ಣ ಸುಟ್ಟುಹೋಗಿವೆ.

ಇದ್ದಕ್ಕಿದ್ದ ಹಾಗೆ ಲೈನ್ ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡು ತೆಂಗಿನ ಮರಗಳಿಗೆ ಆವರಿಸಿಕೊಂಡಿದೆ. ಫಲಬಿಡುವ 25 ತೆಂಗಿನ ಮರ, ಮೂರು ಮಾವು, ಮೂರು ಹುಣಸೆ ಮರ ಮತ್ತು ತೇಗದ ಮರಗಳು ಸಂಪೂರ್ಣ ಸುಟ್ಟುಹೋಗಿವೆ.

ದಂಡಿನಶಿವರ ಬೆಸ್ಕಾಂ ಶಾಖಾಧಿಕಾರಿ ಸೋಮಶೇಖರ್ ಸ್ಥಳಕ್ಕೆ ಬೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ADVERTISEMENT

ವಿದ್ಯುತ್ ಆವಘಡದಿಂದ ಉಂಟಾಗಿರುವ ನಷ್ಟವನ್ನು ಸಂಬಂಧಪಟ್ಟ ಇಲಾಖೆ ಅಥವಾ ಸರ್ಕಾರದಿಂದ ಪರಿಹಾರ ನೀಡಬೇಕು ಎಂದು ರೈತ ಡಿ.ಎಸ್.ರಾಜಶೇಖರ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.