ADVERTISEMENT

ಪಾವಗಡ: ಈದ್ಗಾ ಮೈದಾನದಲ್ಲಿ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 14:14 IST
Last Updated 31 ಮಾರ್ಚ್ 2025, 14:14 IST
ಪಾವಗಡ ಈದ್ಗಾ ಮೈದಾನದಲ್ಲಿ ಸೋಮವಾರ ರಂಜಾನ್ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು
ಪಾವಗಡ ಈದ್ಗಾ ಮೈದಾನದಲ್ಲಿ ಸೋಮವಾರ ರಂಜಾನ್ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಯಿತು   

ಪಾವಗಡ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರ ರಂಜಾನ್ ಹಬ್ಬವನ್ನು ಮುಸ್ಲಿಮರು ಭಕ್ತಿಯಿಂದ ಆಚರಿಸಿದರು.

ರಂಜಾನ್ ಪ್ರಯುಕ್ತ 28 ದಿನ ಉಪವಾಸವಿದ್ದು, 29ನೇ ದಿನ ಚಂದ್ರನ ದರ್ಶನ ಮಾಡಿ 30ನೇ ದಿನ ರಂಜಾನ್ ಆಚರಿಸಲಾಯಿತು.

ಪಟ್ಟಣದ ಪೆನುಗೊಂಡ ಊರುಬಾಗಿಲಿಂದ ಬೆಳಗ್ಗೆ ಮೆರವಣಿಗೆ ಮೂಲಕ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಶಿರಾ ರಸ್ತೆಯ ಈದ್ಗಾ ಮೈದಾನದಲ್ಲಿ ಸೇರಲಾಯಿತು. ಈದ್ಗಾ ಮೈದಾನದಲ್ಲಿ ನಮಾಜ್ ಪೂರೈಸಿ ಸಮುದಾಯದವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ADVERTISEMENT

ಸಮುದಾಯ ಕೆಲವರು ಬಡ ಜನತೆಗೆ, ಅನಾಥರಿಗೆ ಹಣ, ದವಸ, ಧಾನ್ಯ ದಾನ ಮಾಡಿದರು.

ಇಮಾಮ್‌ ಪರೀದ್‌ಉಲ್ಲಾ ಮಾತನಾಡಿ, ದಾನ, ಉಪವಾಸದ ಮಹತ್ವ ತಿಳಿದುಕೊಂಡು ಪ್ರತಿಯೊಬ್ಬರು ಆಚರಣೆ ಮಾಡಬೇಕು. ಹಬ್ಬದ ದಿನಗಳಲ್ಲಿ ಮಾತ್ರ ಪ್ರಾರ್ಥನೆ ಸಲ್ಲಿಸದೆ ಪ್ರತಿನಿತ್ಯ ದೈನಂದಿನ ಚಟುವಟಿಕೆಗಳೊಂದಿಗೆ ಪ್ರಾರ್ಥನೆ ಮಾಡುವ ರೂಢಿ ಅಳವಡಿಸಿಕೊಳ್ಳಬೇಕು ಎಂದರು.

ತಾಲ್ಲೂಕಿನ ವೈ.ಎನ್ ಹೊಸಕೋಟೆಯಲ್ಲಿಯೂ ಶ್ರದ್ಧೆಯಿಂದ ರಂಜಾನ್ ಆಚರಿಸಲಾಯಿತು. ಗ್ರಾಮದ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.

ಯುನುಸ್, ರಫೀಕ್, ಬಾಬಾ, ಖಲೀಂ, ಸದ್ದಾಂ, ಅಜ್ಜು, ಸಲ್ಮಾನ್, ಅಂಜಾದ್, ಎಂಎಜಿ ಇಮ್ರಾನ್, ಜಾವಿದ್, ಸಮೀಉಲ್ಲಾ, ರಫೀಕ್ ಸಾಬ್, ಮೊಹಮ್ಮದ್ ಫಜಲುಲ್ಲಾ, ಅನ್ವರ್, ಬಾಬು, ತಮೀಜ್, ಕಲೀಮ್, ಮೊಹಮ್ಮದ್ ಇಮ್ರಾನ್, ರಿಯಾಜ್, ಆರ್.ಟಿ ಖಾನ್, ಆರ್.ಕೆ ನಿಸಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.