ADVERTISEMENT

ಈಡಿಗರ ಶಿಕ್ಷಣಕ್ಕೆ ಆದ್ಯತೆ: ವಿಖ್ಯಾತನಂದ ಸ್ವಾಮೀಜಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 1:49 IST
Last Updated 1 ಆಗಸ್ಟ್ 2021, 1:49 IST
ತುಮಕೂರಿಗೆ ಭೇಟಿ ನೀಡಿದ ಸೋಲೂರು ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿಯಾಗಿ ನಿಯುಕ್ತಿಗೊಂಡಿರುವ ವಿಖ್ಯಾತನಂದ ಸ್ವಾಮೀಜಿ ಅವರಿಗೆ ಪೂರ್ಣ ಕುಂಬ ಸ್ವಾಗತ ನೀಡಲಾಯಿತು. ರಾಜ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಉಪಾಧ್ಯಕ್ಷರಾದ ಎಂ.ಕೆ.ವೆಂಕಟಸ್ವಾಮಿ, ಕರಿಗಿರಿಯಪ್ಪ ಇತರರು ಇದ್ದರು
ತುಮಕೂರಿಗೆ ಭೇಟಿ ನೀಡಿದ ಸೋಲೂರು ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿಯಾಗಿ ನಿಯುಕ್ತಿಗೊಂಡಿರುವ ವಿಖ್ಯಾತನಂದ ಸ್ವಾಮೀಜಿ ಅವರಿಗೆ ಪೂರ್ಣ ಕುಂಬ ಸ್ವಾಗತ ನೀಡಲಾಯಿತು. ರಾಜ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಜಿಲ್ಲಾ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಉಪಾಧ್ಯಕ್ಷರಾದ ಎಂ.ಕೆ.ವೆಂಕಟಸ್ವಾಮಿ, ಕರಿಗಿರಿಯಪ್ಪ ಇತರರು ಇದ್ದರು   

ತುಮಕೂರು: ಆರ್ಯ ಈಡಿಗ ಸಮುದಾಯದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಕೊಡಿಸುವುದು ನಮ್ಮ ಗುರಿಯಾಗಿದೆ ಎಂದು ಸೋಲೂರಿನ ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿಯಾಗಿ ನಿಯುಕ್ತಿಗೊಂಡಿರುವ ವಿಖ್ಯಾತನಂದ ಸ್ವಾಮೀಜಿ ಹೇಳಿದರು.

ಸೋಲೂರಿನ ರೇಣುಕಾ ಪೀಠ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಮಠದ ಪೀಠಾಧಿಪತಿಯಾಗಿ ಸ್ವಾಮೀಜಿ ನಿಯುಕ್ತಿಗೊಂಡಿದ್ದು, 2022 ಫೆಬ್ರುವರಿ 2ರಂದು ಪೀಠಾರೋಹಣ ಕಾರ್ಯಕ್ರಮ ನೆರವೇರಲಿದೆ. ಅದಕ್ಕೂ ಮುನ್ನ ರಾಜ್ಯದಾದ್ಯಂತ ಪ್ರವಾಸ ಮಾಡಿ ಆರ್ಯ ಈಡಿಗರ ಸಂಘದ ಪದಾಧಿಕಾರಿಗಳು, ಮುಖಂಡರ ಜತೆ ಸಮಾಲೋಚನೆ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಶನಿವಾರ ನಗರದ ಕುಣಿಗಲ್ ರಸ್ತೆ ರಾಮಕೃಷ್ಣ ನಗರದಲ್ಲಿರುವ ಜಿಲ್ಲಾ ಆರ್ಯ ಈಡಿಗರ ಸಂಘದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಸ್ವಾಮೀಜಿ ಮಾತನಾಡಿದರು.

ನಾರಾಯಣಗುರು ಅವರ ಸಿದ್ಧಾಂತದ ಮೇಲೆ ಮಠ ಹಾಗೂ ಸಮುದಾಯವನ್ನು ಸಂಘಟಿಸಿ ಮುನ್ನಡೆಸಲಾಗುವುದು. ಶಿಕ್ಷಣ, ಉದ್ಯೋಗ, ಸೂರು– ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುವುದು. ಜತೆಗೆ ಇತರ ಬಡ, ಹಿಂದುಳಿದ ಸಮುದಾಯಕ್ಕೂ ತಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ರಾಜ್ಯ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ ಮಾತನಾಡಿ, ‘ಸೋಲೂರು ಮಠ ಆರಂಭವಾಗಿ 9 ವರ್ಷಗಳಾಗಿದ್ದು, ಮೊದಲು ರೇಣುಕಾನಂದ ಸ್ವಾಮೀಜಿಯನ್ನು ಪೀಠಾಧಿಪತಿ ಮಾಡಲಾಗಿತ್ತು. ಕಾರಣಾಂತರಗಳಿಂದ ಪೀಠಕ್ಕೆ ಸ್ವಾಮೀಜಿ ರಾಜೀನಾಮೆ ಸಲ್ಲಿಸಿದ್ದರಿಂದ 7 ವರ್ಷಗಳಿಂದ ಮಠಾಧಿಪತಿ ಇರಲಿಲ್ಲ. ಸಮಾಜದ ಯಾರಾದರೊಬ್ಬರನ್ನು ಪೀಠಾಧಿಪತಿಯನ್ನಾಗಿ ಮಾಡಬೇಕೆಂದು ತೀರ್ಮಾನಿಸಲಾಗಿತ್ತು. ಒಬ್ಬರನ್ನು ದತ್ತು ಪಡೆದು ಸಂಸ್ಕೃತ, ವೇದ ಪಾಠಗಳನ್ನು ಕಲಿಸಿ ಪೀಠಕ್ಕೆ ಸ್ವಾಮೀಜಿಯನ್ನಾಗಿ ಮಾಡ
ಲು ತೀರ್ಮಾನವಾಗಿತ್ತು ಎಂದರು.

ಈಗ ಪೀಠಕ್ಕೆ ಸೂಕ್ತವಾದ ವಿಖ್ಯಾತನಂದ ಸ್ವಾಮೀಜಿಯವರನ್ನು ಆಯ್ಕೆ ಮಾಡಿ ನಿಯುಕ್ತಿಗೊಳಿಸಲಾಗಿದೆ. ಎಂದರು.

2007ರಲ್ಲಿ ನಮ್ಮ ಕುಲಕಸುಬು ತೆಗೆದುಹಾಕಿದ ನಂತರ ಈಡಿಗ ಸಮಾಜ ತುಂಬಾ ತೊಂದರೆಗೆ ಒಳಗಾಗಿದೆ. ಜನಾಂಗದ ಅಭಿವೃದ್ಧಿ, ಮಕ್ಕಳ ಮುಂದಿನ ವಿದ್ಯಾಭ್ಯಾಸ, ವಿಭಜನೆಯಾಗಿರುವ 26 ಪಂಗಡಗಳನ್ನು ಒಗ್ಗೂಡಿಸುವ ಸಲುವಾಗಿ ಸ್ವಾಮೀಜಿ ನೇತೃತ್ವದಲ್ಲಿ ಪ್ರವಾಸ ಮಾಡಲಾಗುತ್ತಿದೆ ಎಂದು ಹೇಳಿದರು.

ಜಿಲ್ಲಾ ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಜಯ್ ಕುಮಾರ್, ಪ್ರಧಾನ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ, ಉಪಾಧ್ಯಕ್ಷರಾದ ಎಂ.ಕೆ.ವೆಂಕಟಸ್ವಾಮಿ, ಕರಿಗಿರಿಯಪ್ಪ, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ನ್ಯಾತೇಗೌಡ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಬೆಂಗಳೂರು ನಗರ ಕಾರ್ಯದರ್ಶಿ ರಾಘವೇಂದ್ರರಾವ್, ಚಂದ್ರಕಲಾ ಹನುಮಂತರಾಜು, ಪುರುಷೋತ್ತಮ್, ಎಚ್.ಎಂ.ಟಿ.ನಾಗರಾಜು, ದುಶ್ಯಂತ್, ಪ್ರಕಾಶ್, ಕೊರಟಗೆರೆ ಶಿವಕುಮಾರ್ ಇತರ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.