
ಗುಬ್ಬಿ: ತಾಲ್ಲೂಕಿನಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧತೆ ನಡೆದಿದೆ.
ಪಟ್ಟಣದಲ್ಲಿರುವ ವಿಲಿಯಂ ಆರ್ಥರ್ ಚರ್ಚ್ ಜಿಲ್ಲೆಯಲ್ಲಿಯೇ ಪುರಾತನ ಚರ್ಚ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1837ರಲ್ಲಿ ಕ್ರಿಶ್ಚಿಯನ್ ಮಿಷನರಿಯಾಗಿ ಪ್ರಾರಂಭಗೊಂಡಿದ್ದ ಇದನ್ನು 1904ರಲ್ಲಿ ಚರ್ಚ್ ಆಗಿ ಮಾರ್ಪಡಿಸಲಾಗಿದೆ. ತಾಲ್ಲೂಕಿನಲ್ಲಿರುವ ಏಕೈಕ ಚರ್ಚ್ ಇದಾಗಿದೆ.
ಕ್ರಿಸ್‌ಮಸ್ ಅಂಗವಾಗಿ ಚರ್ಚ್‌ಗೆ ಕಡುಕೆಂಪು ಹಾಗೂ ಬಿಳಿ ಬಣ್ಣ ಬಳಿಯಲಾಗಿದೆ. ಚರ್ಚ್‌ನ ಒಳ ಹಾಗೂ ಹೊರಭಾಗವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಚರ್ಚ್ ಒಳಗೆ ಏಸುಕ್ರಿಸ್ತನ ಜೀವನ ಚರಿತ್ರೆ ತಿಳಿಸುವ ಭಾವಚಿತ್ರಗಳನ್ನು ಹಾಕಲಾಗಿದೆ.
ಗುರುವಾರ ಕ್ರಿಸ್‌ಮಸ್ ಪ್ರಾರ್ಥನೆ ನಂತರ ಹಂಚಲು ಬೃಹತ್ ಕೇಕ್ ವ್ಯವಸ್ಥೆ ಮಾಡಲಾಗಿದೆ. ಬುಧವಾರ ತಡರಾತ್ರಿವರೆಗೆ ಸಂಜೆಯಿಂದ ಕ್ರೈಸ್ತ ಸಮುದಾಯದವರ ಮನೆಗಳಲ್ಲಿ ಭಜನೆಗಳನ್ನು ಹಾಡಲು ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಸಮುದಾಯದವರು ತಿಳಿಸಿದ್ದಾರೆ.
ಗುಬ್ಬಿ ಪಟ್ಟಣ ಹಾಗೂ ತಾಲ್ಲೂಕಿನ ಎಲ್ಲ ಸಮುದಾಯದವರೊಂದಿಗೆ ಸೇರಿ ಹಬ್ಬ ಆಚರಣೆಗೆ ಅತ್ಮೀಯರನ್ನು ಆಹ್ವಾನಿಸಿದ್ದೇವೆ. ಎಲ್ಲಡೆಯೂ ಶಾಂತಿ, ಸಾಮರಸ್ಯ ನೆಲೆಸಲಿ ಎಂದು ಪ್ರಾರ್ಥಿಸುವ ಜೊತೆಗೆ ಮಾನವಿಯ ಸಂದೇಶಗಳನ್ನು ಹಾಗೂ ಪ್ರೀತಿ, ವಾತ್ಸಲ್ಯಗಳ ಮಹತ್ವವನ್ನು ಇಡೀ ಜಗತ್ತಿಗೆ ಸಾರಿರುವ ಏಸುಕ್ರಿಸ್ತನ ಸಂದೇಶಗಳನ್ನು ಎಲ್ಲರಿಗೂ ತಿಳಿಸಿ ಮಾನವೀಯ ಸಂಬಂಧಗಳನ್ನು ಬೆಳೆಸಿ ಉತ್ತಮ ಸಮಾಜ ನಿರ್ಮಿಸಲು ಎಲ್ಲರೂ ಜೊತೆಗೂಡಿ ಸಾಗೋಣ ಎನ್ನುವ ಸಂದೇಶ ಸಾರುತ್ತ ಹಬ್ಬದ ಆಚರಣೆ ಮಾಡುತ್ತೇವೆ’ ಎಂದು ಚರ್ಚ್‌ನ ಪಾದ್ರಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.