
ಪ್ರಜಾವಾಣಿ ವಾರ್ತೆ
ಕೊರಟಗೆರೆ: ಮಂಗಳವಾರ ರಾತ್ರಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಭರಣಿ ಮಳೆ ಬಿದ್ದಿದ್ದು, ಬಿಸಿಲ ಝಳದಿಂದ ಬೆಂದಿದ್ದ ಜನರಿಗೆ ಒಂದಿಷ್ಟು ತಂಪೆರೆದಂತಾಗಿದೆ.
ಮಂಗಳವಾರ ಸಂಜೆ ಶುರುವಾದ ಬಿರುಗಾಳಿ, ಮಿಂಚು, ಗುಡುಗು ಸಹಿತ ಮಳೆ ಸುಮಾರು ಮುಕ್ಕಾಲು ಗಂಟೆಗೂ ಹೆಚ್ಚು ಹೊತ್ತು ಸುರಿಯಿತು. ತಗ್ಗು ಪ್ರದೇಶಗಳ ಗುಂಡಿಗಳಲ್ಲಿ ಅಲ್ಲಲ್ಲಿ ನೀರು ತುಂಬಿದ್ದು ಕಂಡು ಬಂತು. ಆಲಿಕಲ್ಲು ಸಹಿತ ಮಳೆ ಸುರಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.