ADVERTISEMENT

ತುಮಕೂರು | ಗಾಳಿಗೆ ನೆಲಕಚ್ಚಿದ ತೋಟ

​ಪ್ರಜಾವಾಣಿ ವಾರ್ತೆ
Published 26 ಮೇ 2020, 17:31 IST
Last Updated 26 ಮೇ 2020, 17:31 IST
ಶಿರಾ ತಾಲ್ಲೂಕಿನ ಬೊಪ್ಪನಡು ಗ್ರಾಮದಲ್ಲಿ ಬಿರುಗಾಳಿಯಿಂದ ಅಡಿಕೆ ಮರ ನೆಲಕ್ಕುರುಳಿವೆ
ಶಿರಾ ತಾಲ್ಲೂಕಿನ ಬೊಪ್ಪನಡು ಗ್ರಾಮದಲ್ಲಿ ಬಿರುಗಾಳಿಯಿಂದ ಅಡಿಕೆ ಮರ ನೆಲಕ್ಕುರುಳಿವೆ   

ಪಟ್ಟನಾಯಕನಹಳ್ಳಿ: ಸೋಮವಾರ ರಾತ್ರಿ ಬೀಸಿದ ಗಾಳಿಗೆ ಶಿರಾ ತಾಲ್ಲೂಕಿನ ಪೂಜಾರ ಮುದ್ದನಹಳ್ಳಿ, ಕಲ್ಲಹಳ್ಳಿ, ಅರಿಯಜ್ಜಹಳ್ಳಿ, ಬೊಪ್ಪನಡು, ಸೀಗಲಹಳ್ಳಿ ಹಾಗೂ ನಾದೂರು ಗ್ರಾಮದಲ್ಲಿ ಅಡಿಕೆ, ತೆಂಗು ಹಾಗೂ ಬಾಳೆ ತೋಟ ನೆಲಕಚ್ಚಿದೆ.

ಪೂಜಾರ ಮುದ್ದನಹಳ್ಳಿ ಗ್ರಾಮದ ಚಂದ್ರಣ್ಣ ಅವರಿಗೆ ಸೇರಿದ 400 ಅಡಿಕೆ ಮರ, 15 ತೆಂಗಿನ ಮರ ನೆಲಕ್ಕೆ ಉರುಳಿವೆ. ಗ್ರಾಮದಲ್ಲಿ ಐದು ಮನೆಗಳಿಗೆ ಹಾನಿಯಾಗಿದೆ.

ಬೊಪ್ಪನಡು ಗ್ರಾಮದಲ್ಲಿ ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಅರಿಯಜ್ಜಹಳ್ಳಿ ಗ್ರಾಮದಲ್ಲಿ ಅಡಿಕೆ ತೋಟ ಹಾಳಾಗಿದೆ. ಕಲ್ಲಹಳ್ಳಿ ಗ್ರಾಮದ ಮಹೇಂದ್ರ, ಅನಿಲ್ ಅವರಿಗೆ ಸೇರಿದ ತೋಟ ಹಾಳಾಗಿದೆ.

ADVERTISEMENT

ಸೀಗಲಹಳ್ಳಿ ಸತೀಶ್‌ರ ಬಾಳೆ ತೋಟ, ನಾದೂರು ಗ್ರಾಮದ ಎನ್.ಬಿ.ಶಿವಕುಮಾರ್ ಅವರ ಎರಡು ಎಕರೆ ಬಾಳೆತೋಟಹಾನಿಯಾಗಿದೆ.

ಹಾನಿಗೊಳಗಾದ ಪ್ರದೇಶಕ್ಕೆ ಶಾಸಕ ಬಿ.ಸತ್ಯನಾರಾಯಣ ಭೇಟಿ ನೀಡಿ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಮುಖಂಡ ಟಿ.ಬಿ.ಜಯಚಂದ್ರ ಭೇಟಿನೀಡಿ ಎಕರೆ ಅಥವಾ ಹೆಕ್ಟೇರ್ ಲೆಕ್ಕದಲ್ಲಿ ಪರಿಹಾರ ನೀಡಿದರೆ ರೈತರಿಗೆ ಅನ್ಯಾಯವಾಗಲಿದೆ. ಪ್ರತಿ ಮರಕ್ಕೆ ಅದರ ವಯಸ್ಸಿನ ಆಧಾರದಲ್ಲಿ ₹ 20,000 ಪರಿಹಾರ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.