ತೋವಿನಕೆರೆ: ಕೆಂಪು ಹಲಸಿನ ಕಾಯಿ ಕೆ.ಜಿಗೆ ₹80, ಇತರೆ ಬಣ್ಣದ ಹಲಸು ಕೆ.ಜಿಗೆ ₹50ರಂತೆ ಬೆಂಗಳೂರು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಸುತ್ತಲಿನ ಪ್ರದೇಶಗಳಲ್ಲಿ ಹೆಚ್ಚಾಗಿ ಸಿಗುವ ಕೆಂಪುಬಣ್ಣದ ಹಲಸೆಂದರೆ ಹಲಸು ಪ್ರಿಯರಿಗೆ ತುಸು ಹೆಚ್ಚು ಪ್ರೀತಿ.
ಹಲಸಿನ ಕಾಯಿ ಕೆ.ಜಿಗೆ ₹75, ಬೀಜ ತೆಗೆದ ಕೆಂಪು ಹಲಸಿನ ಸೊಳೆ ಕೆ.ಜಿ.ಗೆ ₹325, ಬೀಜ ಸಹಿತ ಸೊಳೆ ಕೆ.ಜಿಗೆ ₹300, ಹಲಸಿನ ಬೀಜ ಕೆ.ಜಿಗೆ ₹50ರಂತೆ ಮಾರಾಟವಾಗುತ್ತಿದೆ.
ಬೆಳೆಗಾರರಿಗೆ ಕೆ.ಜಿಗೆ ₹10ರಿಂದ ₹15 ಸಿಗುತ್ತಿಲ್ಲ. 50ರಿಂದ 200 ಕಾಯಿಗಳು ಇರುವ ಮರ ಕೇವಲ ₹1,000ರಿಂದ ₹2,500ಕ್ಕೆ ಮಾರಾಟವಾಗುತ್ತಿದೆ. ಎಳೆಯ ಹಲಸಿನ ಕಾಯಿಯ ಮರಗಳು ಸಹ ಇದೇ ಬೆಲೆಗೆ ಮಾರಾಟವಾಗುತ್ತಿವೆ.
ಸುಸಜ್ಜಿತ ಮಾರುಕಟ್ಟೆ ಇಲ್ಲ. ತೋವಿನಕೆರೆ ಸುತ್ತಲಿನ ಪ್ರದೇಶಗಳ ಹಲಸಿನ ಹಣ್ಣಿಗೆ ಮಲೆನಾಡು, ಕರಾವಳಿ ಪ್ರದೇಶಗಳ ಮೇಳಗಳಲ್ಲಿ ಬೇಡಿಕೆ ಹೆಚ್ಚಿದೆ. ಸ್ಥಳೀಯವಾಗಿ ಕೆ.ಜಿಗೆ ₹5ರಿಂದ ₹10ರಂತೆ ಮಾರಾಟವಾದರೆ ಮಲೆನಾಡಿನಲ್ಲಿ ₹40ರಂತೆ ಮಾರಾಟವಾಗುತ್ತದೆ.
30 ವರ್ಷದ ಹಿಂದೆ ತಂದೆ ಮುದ್ದಯ್ಯ ಹಲಸಿನ ಮರ ಬೆಳಸಿದ್ದಾರೆ. ಅ ದಿನದಿಂದಲೂ ಮುದ್ದಯ್ಯನ ಮರದ ಹಣ್ಣು ಎಂದು ಪ್ರಸಿದ್ಧ ಪಡೆದಿದೆ. ಈಗ ‘ಮುದ್ದು ಆರೆಂಜ್ ಹಲಸಿನ ಹಣ್ಣು’ ಎನ್ನುತ್ತಾರೆ. ಬೆಂಗಳೂರಿನಲ್ಲಿ ಕಾಯಿ ಕೆ.ಜಿಗೆ ₹100ರಂತೆ ಮಾರಾಟವಾಗುತ್ತಿದೆ. ಬಣ್ಣ ರುಚಿ ಆಕರ್ಷಕವಾಗಿದೆ. ಕಳೆದ ವರ್ಷದಿಂದ ಸಸಿಗಳಿಗೆ ಬೇಡಿಕೆ ಬಂದಿದೆ. ಮಂಜು ಬೆಂಡೋಣೆ ಸಿದ್ಧರಬೆಟ್ಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.