ADVERTISEMENT

ದಾಖಲೆಗಳ ದುರ್ಬಳಕೆ: ಮನೆ ಕಟ್ಟದೆ ಅನುದಾನ ಬಿಡುಗಡೆ

ಗ್ರಾ.ಪಂ ಅಧಿಕಾರಿಗಳ ವಿರುದ್ಧ ಆರೋಪ

ಸುಪ್ರತೀಕ್.ಎಚ್.ಬಿ.
Published 17 ಜನವರಿ 2021, 1:34 IST
Last Updated 17 ಜನವರಿ 2021, 1:34 IST
16-ಟಿಪಿಆರ್ 1 : ಅಕ್ರಮವಾಗಿ ಹಣ ಸಂದಾಯವಾಗಿರುವ ಲಕ್ಷ್ಮೀದೇವಮ್ಮ ನಿವೇಶನದ ದಾಖಲೆಯ ಚಿತ್ರ.
16-ಟಿಪಿಆರ್ 1 : ಅಕ್ರಮವಾಗಿ ಹಣ ಸಂದಾಯವಾಗಿರುವ ಲಕ್ಷ್ಮೀದೇವಮ್ಮ ನಿವೇಶನದ ದಾಖಲೆಯ ಚಿತ್ರ.   

ತಿಪಟೂರು: ತಾಲ್ಲೂಕಿನ ದೊಡ್ಡ ಹಾಗೂ ಆದಾಯದಲ್ಲಿ ಮುಂಚೂಣಿಯಲ್ಲಿರುವ ಕಸಬಾ ಹೋಬಳಿಯ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯ ವಸತಿ ನಿಗಮದಲ್ಲಿ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು ವಸತಿ ಯೋಜನೆಯಡಿ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

2017-18ನೇ ಸಾಲಿನ ಬಸವ ವಸತಿ ಯೋಜನೆಯಲ್ಲಿ ಮತ್ತಿಹಳ್ಳಿಯ ಗಂಗಮ್ಮ ಅವರಿಗೆ (ಫಲಾನುಭವಿ ಸಂಖ್ಯೆ 578322) ವಸತಿ ನಿವೇಶನವನ್ನು ಆಯ್ಕೆ ಮಾಡಿದ್ದು, ಅದರ ಅಡಿಪಾಯ, ಗೋಡೆ, ಚಾವಣಿಯ ಎಲ್ಲ ಫೊಟೊಗಳನ್ನು ಉಪಯೋಗಿಸಿಕೊಂಡು ಮತ್ತಿಹಳ್ಳಿ ಗ್ರಾಮದ ಲಕ್ಷ್ಮಿದೇವಮ್ಮ (ಫಲಾನುಭವಿ ಸಂಖ್ಯೆ 561376) ಅವರಿಗೆ 2016-17ನೇ ಸಾಲಿನ ಡಾ. ಅಂಬೇಡ್ಕರ್ ನಿವಾಸ ಯೋಜನೆಯಲ್ಲಿ ಯಾವುದೇ ತಳಪಾಯ, ಮನೆಯನ್ನು ಕಟ್ಟದೇ ಕಾವೇರಿ ಗ್ರಾಮೀಣ ಬ್ಯಾಂಕ್‍ಗೆ ಎರಡು ಹಂತಗಳಲ್ಲಿ ₹1.12 ಲಕ್ಷ ಸಂದಾಯ ಮಾಡಲಾಗಿದೆ. ಒಂದೇ ಮನೆಯ ಫೋಟೊಗಳನ್ನು ಬಳಸಿಕೊಂಡು ಮತ್ತೊಂದು ಮನೆಗೆ ಅಕ್ರಮವಾಗಿ ಹಣ ಸಂದಾಯ ಮಾಡಲಾಗಿದೆ.

ಐದು ವರ್ಷಗಳ ಅವಧಿಯಲ್ಲಿ ಮತ್ತಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಸುಮಾರು ನಾಲ್ಕು ಜನ ಪಿಡಿಒಗಳು ಬದಲಾಗಿದ್ದು, ಭಾರೀ ಹಗರಣಕ್ಕೆ ಕಾರಣವಾಗಿದೆ. ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿಯೂ ಹಣ ಸಂದಾಯ ಮಾಡುವ ಸಂಬಂಧ ಕಾಮಗಾರಿಗಳ ಅನುಷ್ಠಾನ ಮತ್ತು ಬಳಕೆಯ ವಿಚಾರದಲ್ಲಿ ಅತಿ ಹೆಚ್ಚು ಹಗರಣ ನೆಡೆದಿದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ADVERTISEMENT

ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಇಂತಹ ಎಷ್ಟು ಅವ್ಯವಹಾರಗಳು ನಡೆದಿವೆ ಎನ್ನುವ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.