ADVERTISEMENT

‘ಕನ್ನಡದ ಉಳಿವಿಗೆ ಸಂಕಲ್ಪ ಮಾಡಿ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2022, 4:00 IST
Last Updated 8 ಡಿಸೆಂಬರ್ 2022, 4:00 IST
ಮರಿದಾಸನಹಳ್ಳಿಯಲ್ಲಿ ನಡೆದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಾಜಗೋಪಾಲ್ ಮಾತನಾಡಿದರು 
ಮರಿದಾಸನಹಳ್ಳಿಯಲ್ಲಿ ನಡೆದ ಶಾಲೆಗೊಂದು ಕನ್ನಡ ಕಾರ್ಯಕ್ರಮದಲ್ಲಿ ಮುಖ್ಯಶಿಕ್ಷಕ ರಾಜಗೋಪಾಲ್ ಮಾತನಾಡಿದರು    

ವೈ.ಎನ್. ಹೊಸಕೋಟೆ: ಪ್ರತಿಯೊಬ್ಬ ಕನ್ನಡಿಗ ಸಂಕಲ್ಪದೊಂದಿಗೆ ಶ್ರಮಿಸುವುದರಿಂದ ಗಡಿ ಭಾಗದಲ್ಲಿ ಭಾಷಾ ಉಳಿವು ಸಾಧ್ಯ ಎಂದು ಕನ್ನಡ ಶಿಕ್ಷಕ ಗಂಗಾಧರ ತಿಳಿಸಿದರು.

ಹೋಬಳಿಯ ಮರಿದಾಸನಹಳ್ಳಿಯಲ್ಲಿ ಬುಧವಾರ ಕನ್ನಡ ಸಾಹಿತ್ಯ ಪರಿಷತ್‌ನ ಹೋಬಳಿ ಘಟಕದಿಂದ ಹಮ್ಮಿಕೊಂಡಿದ್ದ ಶಾಲೆಗೊಂದು ಕನ್ನಡ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಭಾರ ಪ್ರಾಂಶುಪಾಲ ಆಂಜನೇಯ ಮಾತನಾಡಿದರು.ಮುಖ್ಯಶಿಕ್ಷಕ ರಾಜಗೋಪಾಲ ಅಧ್ಯಕ್ಷತೆವಹಿಸಿ ಮಾತನಾಡಿದರು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ, ಕಸಾಪ ಕಾರ್ಯದರ್ಶಿ ಚಂದ್ರಶೇಖರ ಮುದ್ರಾಡಿ, ನಿರ್ದೇಶಕ ಚನ್ನಮಲ್ಲಿಕಾರ್ಜುನ, ಉಪನ್ಯಾಸಕರಾದ ರಮೇಶ್, ನಾಗಾನಂದ, ಅನಿಲ್ ಹಾಜರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.