
ಕೊಡಿಗೇನಹಳ್ಳಿ: ರಸ್ತೆಬದಿಯಲ್ಲಿನ ಕೋಳಿ ಮಾಂಸದ ಅಂಗಡಿಗಳನ್ನು ಭಾನುವಾರ ಸಂಜೆಯೊಳಗೆ ತೆರವುಗೊಳಿಸಬೇಕೆಂದು ಅಧಿಕಾರಿಗಳ ತಂಡ ಶನಿವಾರ ಅಂಗಡಿ ಮಾಲಿಕರಿಗೆ ಸೂಚಿಸಿದರು.
ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ನೇತೃತ್ವದಲ್ಲಿ ಕಂದಾಯ, ಲೋಕೋಪಯೋಗಿ, ಪೊಲೀಸ್ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ತಂಡ ಸೂಚನೆ ನೀಡಿತು.
ಪಟ್ಟಣದ ಗೌರಿಬಿದನೂರು ರಸ್ತೆಯಿಂದ ಬಸ್ ನಿಲ್ದಾಣ ಮಾರ್ಗವಾಗಿ ಕೊಲ್ಲಾಪುರದಮ್ಮ ದೇವಸ್ಥಾನದವರೆಗೆ ತೆರಳಿ ರಸ್ತೆ ಬದಿಯ ಅಂಗಡಿ ಮತ್ತು ಕೋಳಿ ಅಂಗಡಿಯವರಿಗೆ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಲು ತುರ್ತಾಗಿ ರಸ್ತೆ ಮಧ್ಯ ಮಾರ್ಗದಿಂದ ಕನಿಷ್ಠ 15 ಮೀಟರ್ ಮಾರ್ಕ್ ಮಾಡಬೇಕು ಹಾಗಾಗಿ ಒತ್ತುವರಿ ತೆರವುಗೊಳಿಸುವಂತೆ ಸೂಚಿಸಿದರು.
ಜಾತ್ರೆ ಮತ್ತು ಹಬ್ಬವಿರುವ ಕಾರಣ ಸ್ವಲ್ಪದಿನ ಕಾಲಾವಕಾಶ ನೀಡುವಂತೆ ಅಧಿಕಾರಿಗಳಿಗೆ ಮನವಿ ಅಂಗಡಿ ಮಾಲಿಕರು ಮಾಡಿದರು.
ತಹಶೀಲ್ದಾರ್ ಶ್ರೀನಿವಾಸ್, ಇಒ ಲಕ್ಷ್ಮಣ್, ಲೋಕೋಪಯೋಗಿ ಇಲಾಖೆ ಇಇ ಹನುಮಂತರಾವ್, ಎಇಇ ಸಂಪತ್, ಪಿಎಸ್‌ಸಿ ಶ್ರೀನಿವಾಸ್, ಕಂದಾಯ ತನಿಖಾಧಿಕಾರಿ ರವೀಂದ್ರ, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.