ತುರುವೇಕೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಪಟ್ಟಣದಲ್ಲಿ ಗಣವೇಷಧಾರಿಗಳ ಪಥಸಂಚಲನ ನೆಡೆಯಿತು.
ಪಟ್ಟಣದ ಉಡಸಲಮ್ಮ ದೇವಾಲಯದ ಆವರಣದಲ್ಲಿ ಜಮಾವಣೆಗೊಂಡ ತಾಲ್ಲೂಕಿನ ಸಾವಿರಾರು ಗಣವೇಷಧಾರಿಗಳು ಭಾರತಾಂಬೆ ಫೋಟೊಗೆ ಪೂಜೆ. ಧ್ವಜವಂದನೆ ಸಲ್ಲಿಸಿದರು. ನಂತರ ಪಥಸಂಚಲನ ಆರಂಭಿಸಿದರು.
ಮಕ್ಕಳು, ಯುವಕರು ಸೇರಿ ಹಲವು ಜನರು ಸ್ವಯಂಪ್ರೇರಿತರಾಗಿ ಗಣ ವೇಷಧಾರಿಗಳಾಗಿ ಭಾಗವಹಿಸಿದ್ದರು. ಬೆಳಿಗ್ಗೆ 11.30ಕ್ಕೆ ಆರಂಭಗೊಂಡ ಪಥಸಂಚಲನ ಸಂತೆ ಮೈದಾನದಿಂದ ಬಾಣಸಂದ್ರ ರಸ್ತೆ, ಎಸ್.ಬಿ.ಎಂ ಬ್ಯಾಂಕ್ ರಸ್ತೆ, ತಿಪಟೂರು ರಸ್ತೆ ಮೂಲಕ ಸಾಗಿ ಉಡಸಲಮ್ಮದೇವಿ ಆವರಣದಲ್ಲಿ ಮುಕ್ತಾಯವಾಯಿತು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗಣವೇಷಧಾರಿಗಳು ಪಥಸಂಚಲನ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಸಿಬಿ ಮೂಲಕ ಹೂ ಮಳೆ ಸುರಿಸಲಾಯಿತು. ಪಟ್ಟಣದ ಜನರು ತಮ್ಮ ಮನೆ ಅಂಗಡಿ ಮುಂಭಾಗ ಸಾಗುವಾಗ ಪುಷ್ಪದಿಂದ ಸ್ವಾಗತಿಸಿದರು.
ಗಣವೇಷಧಾರಿಗಳಾಗಿ ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಶಾಸಕ ಮಸಾಲ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ್ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.