ADVERTISEMENT

ಸರ್ಕಾರಗಳಿಂದ ದಮನಕಾರಿ ನೀತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 14:11 IST
Last Updated 10 ಆಗಸ್ಟ್ 2020, 14:11 IST
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ‘ನಾವು ಭಾರತೀಯರು’ ಸಂಘಟನೆಯಿಂದ ಕ್ವಿಟ್ ಇಂಡಿಯಾ ದಿನದ ಅಂಗವಾಗಿ ಭಾರತ ಉಳಿಸಿ ಪ್ರತಿಭಟನೆ ನಡೆಯಿತು
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ‘ನಾವು ಭಾರತೀಯರು’ ಸಂಘಟನೆಯಿಂದ ಕ್ವಿಟ್ ಇಂಡಿಯಾ ದಿನದ ಅಂಗವಾಗಿ ಭಾರತ ಉಳಿಸಿ ಪ್ರತಿಭಟನೆ ನಡೆಯಿತು   

ತುಮಕೂರು: ಸರ್ಕಾರಗಳು ಕೊರೊನಾ ಸೋಂಕಿನ ಭೀತಿ ಹುಟ್ಟಿಸಿ ದಮನಕಾರಿ ಕಾಯ್ದೆಗಳನ್ನು ಜಾರಿಗೊಳಿಸುತ್ತಿವೆ. ಇದು ರೈತ, ಕಾರ್ಮಿಕ ಮತ್ತು ಜನ ವಿರೋಧಿ ಆಗಿದೆ ಎಂದು ಪಿ‌ಯುಸಿಎಲ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ದೊರೈರಾಜ್ ಆರೋಪಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ‘ನಾವು ಭಾರತೀಯರು’ ಸಂಘಟನೆಯಿಂದ ಕ್ವಿಟ್ ಇಂಡಿಯಾ ದಿನದ ಅಂಗವಾಗಿ ನಡೆದ ಭಾರತ ಉಳಿಸಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಕಾಯಿಲೆಯನ್ನು ಭಯೋತ್ಪಾದನೆ ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಜನರ ಕಷ್ಟಗಳಿಗೆ ಸ್ಪಂದಿಸಬೇಕಾದ ಸರ್ಕಾರಗಳು ಬಂಡವಾಳಶಾಹಿ, ಶ್ರೀಮಂತರೊಂದಿಗೆ ಸೇರಿ ಕೋಮುವಾದಿ ಮತ್ತು ಜನ ವಿರೋಧಿ ನೀತಿಗಳನ್ನು ಜಾರಿಗೊಳಿಸುತ್ತಿವೆ. ಇಂತಹ ಸಂದರ್ಭದಲ್ಲಿ ಹೋರಾಟಗಳು ಅಗತ್ಯ ಎಂದು ಪ್ರತಿಪಾದಿಸಿದರು.

ADVERTISEMENT

ಮುಖಂಡ ತಾಜುದ್ದೀನ್ ಷರೀಫ್, ‘ದೇಶದಲ್ಲಿ ಪ್ರಗತಿಪರರನ್ನು ಬಂಧಿಸುವ, ಅವರನ್ನು ಸುಳ್ಳು ಮೊಕದ್ದಮೆಗಳಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವ ಸೇಡಿನ ಕ್ರಮವನ್ನು ಸರ್ಕಾರಗಳು ನಿಲ್ಲಿಸಬೇಕು’ ಎಂದು ಆಗ್ರಹಿಸಿದರು.

ರೈತ ಮುಖಂಡ ಬಿ.ಉಮೇಶ್, ಪರಿಸರವಾದಿ ಸಿ.ಯತಿರಾಜು, ಖಲೀಲ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.