ADVERTISEMENT

ಅಪಮಾನ ನುಂಗಿ ಅಕ್ಷರ ಕಲಿಸಿದ ಗುರು

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರದಿಂದ ‘ಸಾವಿತ್ರಿಬಾಯಿ ಫುಲೆ ನೆನಪು’

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 11:25 IST
Last Updated 4 ಜನವರಿ 2020, 11:25 IST
ಕುಲಪತಿ ವೈ.ಎಸ್‌.ಸಿದ್ದೇಗೌಡ ಅವರು ಮಾತನಾಡಿದರು.
ಕುಲಪತಿ ವೈ.ಎಸ್‌.ಸಿದ್ದೇಗೌಡ ಅವರು ಮಾತನಾಡಿದರು.   

ತುಮಕೂರು: ಸಾವಿತ್ರಿಬಾಯಿ ಫುಲೆ ಅವರುಹೆಣ್ಣು ಮಕ್ಕಳಿಗೆ ಅಕ್ಷರದ ಮಹತ್ವವನ್ನು ತಿಳಿಸಿಕೊಟ್ಟರು ಎಂದು ಲೇಖಕಿ ಮಲ್ಲಿಕಾ ಬಸವರಾಜು ಅವರು ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಹಾಗೂ ವಿ.ವಿ. ಕಲಾ ಕಾಲೇಜಿನ ಸಹಯೋಗದಲ್ಲಿ ಶುಕ್ರವಾರ ನಡೆದ ‘ಸಾವಿತ್ರಿಬಾಯಿ ಫುಲೆ ನೆನಪು’ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಸಾವಿತ್ರಿಬಾಯಿ ಫುಲೆ ಅವರು ದೇಶದ ಮೊದಲ ಶಿಕ್ಷಕಿ. ಮೊದಲಿಗೆ ಶಾಲೆಯನ್ನು ತೆರೆದು ಒಂಭತ್ತು ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಕೊಟ್ಟರು. ಸಮಾಜದಲ್ಲಿ ನಡೆದ ಅವಮಾನಗಳನ್ನು, ದೌರ್ಜನ್ಯಗಳನ್ನು ಮತ್ತು ಅಡೆತಡೆಗಳನ್ನು ದಾಟಿ ನಡೆದ ಧೀರ ಮಹಿಳೆ ಅವರು ಎಂದರು.

ADVERTISEMENT

ಸ್ತ್ರೀ ಶಿಕ್ಷಣ, ವಿಧವಾ ವಿವಾಹ ಪ್ರೋತ್ಸಾಹಿಸಿದರು. ಬಾಲ್ಯ ವಿವಾಹ, ಸತಿಸಹಗಮನ ಪದ್ಧತಿಯ ನಿರ್ಮೂಲನೆ ಮಾಡುವುದರಲ್ಲಿ ಮೊದಲಿಗರಾದರು ಎಂದರು.

ವಿಶ್ವವಿದ್ಯಾನಿಲಯ ಕಲಾಕಾಲೇಜಿನ ಪ್ರಾಂಶುಪಾಲ ಕೆ.ರಾಮಚಂದ್ರಪ್ಪ, ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಮಹಿಳಾ ಶಿಕ್ಷಣಕ್ಕೆ ಪ್ರಾಶಸ್ತ್ಯ ಕೊಟ್ಟವರು ಪುಲೆ ದಂಪತಿ. ಅವರ ಪರಿಶ್ರಮವನ್ನು ಇಂದು ಎಲ್ಲರೂ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ವೈ.ಎಸ್.ಸಿದ್ದೇಗೌಡ,ಮಹಿಳಾ ಅಧ್ಯಯನ ಕೇಂದ್ರದ ಸಂಯೋಜಕರಾದ ಜ್ಯೋತಿ, ವಿದ್ಯಾರ್ಥಿ ಕ್ಷೇಮ ಪಾಲನ ವಿಭಾಗದ ನಿರ್ದೇಶಕ ಎಂ.ಕೊಟ್ರೇಶ್, ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಜಾಯ್ ನೆರೆಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.