ADVERTISEMENT

ಯುವಕರೇ ಸಮಾಜದ ಆಸ್ತಿ: ಸಚಿವ ಜಿ.ಪರಮೇಶ್ವರ

ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 16:49 IST
Last Updated 1 ಅಕ್ಟೋಬರ್ 2023, 16:49 IST
ತುಮಕೂರಿನಲ್ಲಿ ಭಾನುವಾರ ಆರ್‌.ಎಂ.ಆರ್‌. ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಸಚಿವರಾದ ಜಿ.ಪರಮೇಶ್ವರ, ಕೆ.ಎನ್‌.ರಾಜಣ್ಣ, ಶಾಸಕ ಟಿ.ಬಿ.ಜಯಚಂದ್ರ, ಟ್ರಸ್ಟ್‌ನ ಅಧ್ಯಕ್ಷ ಎ.ಎಂ.ನಾಗರಾಜ್‌ ಇತರರು ಇದ್ದಾರೆ

ತುಮಕೂರು: ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕೆಲಸ ಮಾಡಬೇಕು. ಸ್ವಾವಲಂಬಿ ಜೀವನ ಸಾಗಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಸಲಹೆ ಮಾಡಿದರು.

ನಗರದಲ್ಲಿ ಭಾನುವಾರ ಆರ್‌.ಎಂ.ಆರ್‌.ಹಳ್ಳಿಕಾರ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ಹಮ್ಮಿಕೊಂಡಿದ್ದ ಹಳ್ಳಿಕಾರ ಸಮುದಾಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.

ಹಳ್ಳಿಕಾರ ಸಮುದಾಯ ಅತ್ಯಂತ ಸಭ್ಯತೆಯಿಂದ ನಡೆದುಕೊಳ್ಳುವ ಸಮುದಾಯ. ಯುವ ಸಮೂಹ ವಿದ್ಯಾವಂತರಾಗಿ ರೂಪುಗೊಳ್ಳಬೇಕು. ಐಎಎಸ್‌, ಐಪಿಎಸ್‌ನಂತಹ ಉನ್ನತ ಸ್ಥಾನಗಳನ್ನು ಅಲಂಕರಿಸಬೇಕು. ಈಗಿನಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಬೇಕು ಎಂದರು ತಿಳಿಸಿದರು.

ADVERTISEMENT

ಸಹಕಾರ ಸಚಿವ ಕೆ.ಎನ್‌.ರಾಜಣ್ಣ, ‘ಎಲ್ಲರಲ್ಲೂ ಸಮಾನವಾದ ಪ್ರತಿಭೆ, ಬುದ್ಧ ಶಕ್ತಿ ಇರುತ್ತದೆ. ಪ್ರತಿಭೆಯ ಅನಾವರಣಕ್ಕೆ ಅವಕಾಶ ಒದಗಿಸಬೇಕು. ಯುವಕರು ಸಮಾಜದ ಆಸ್ತಿಯಾಗಬೇಕು. ಜೀವನದಲ್ಲಿ ಉತ್ತಮ ಗುಣಗಳನ್ನು ರೂಢಿಸಿಕೊಳ್ಳಬೇಕು. ಎಲ್ಲರು ವಿದ್ಯಾವಂತರಾಗಿ ಕುಟುಂಬ, ಸಮಾಜಕ್ಕೆ ಗೌರವ ತರಬೇಕು’ ಎಂದರು.

ಶಾಸಕ ಟಿ.ಬಿ.ಜಯಚಂದ್ರ, ಟ್ರಸ್ಟ್‌ನ ಅಧ್ಯಕ್ಷ ಎ.ಎಂ.ನಾಗರಾಜ್‌ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.