ಹುಳಿಯಾರು: ಹೋಬಳಿಯ ದಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ದಬ್ಬಗುಂಟೆ ಗ್ರಾಮದಲ್ಲಿ ಕೊರೊನಾ ಸೋಂಕು ತಡೆಗೆ ಗ್ರಾಮಸ್ಥರು ಚೆಕ್ ಪೋಸ್ಟ್ ನಿರ್ಮಿಸಿ ಗ್ರಾಮಕ್ಕೆ ಬಂದು ಹೋಗುವವರ ಉಷ್ಣಾಂಶ ಪರೀಕ್ಷೆ ಮಾಡುವ ಮೂಲಕ ಸ್ವಯಂ ನಿರ್ಬಂಧಕ್ಕೆ ಮುಂದಾಗಿದ್ದಾರೆ.
ಗ್ರಾಮಸ್ಥರು ಸಭೆ ನಡೆಸಿ ಹಣ ಸಂಗ್ರಹಿಸಿ ಉಷ್ಣಾಂಶ ಪರೀಕ್ಷೆ ಮಾಪಕ ತಂದಿದ್ದಾರೆ. ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ಪೊಲೀಸ್, ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಕಾರದೊಂದಿಗೆ ಗ್ರಾಮಕ್ಕೆ ಒಂದೇ ಕಡೆ ಜನರು ಬರುವಂತೆ ಮಾಡಿಕೊಂಡಿದ್ದಾರೆ.
ಗ್ರಾಮಕ್ಕೆ ಬರುವ ಮತ್ತು ಹೋಗುವವರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುತ್ತಾರೆ. ಗ್ರಾಮ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮಿಕಾಂತ ಜಿ.ಹರ್ತಿ, ಡಿ.ಜಿ.ಸತ್ಯನಾರಾಯಣ, ಡಿ.ಗೋವಿಂದ ರಾಜು, ಶಿವಣ್ಣ, ಜಿಯಾವುಲ್ಲಾ, ಕುಮಾರ ಸ್ವಾಮಿ, ನರಸಿಂಹಮೂರ್ತಿ, ನಟರಾಜು, ವೆಂಕಟೇಶ್, ಮಲ್ಲಿಕಾ, ಮಹೇಶ್, ಬಡಗಿ ಮಂಜಣ್ಣ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.