ADVERTISEMENT

‘ಶಾರದಾ ನಿನಾದ’ ವಿಶೇಷ ಸಂಗೀತ ಕಛೇರಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 16:05 IST
Last Updated 14 ಏಪ್ರಿಲ್ 2019, 16:05 IST
ಶಾರದಾ ನಿನಾದ ಸಂಗೀತ ಕಾರ್ಯಕ್ರಮವನ್ನು ಮಾತಾಜೀ ಚೈತನ್ಯಮಯೀ ಅವರು ಉದ್ಘಾಟಿಸಿದರು. ಚಿತ್ರದಲ್ಲಿ  ಮೈಸೂರು ನಾಗರಾಜ್, ಡಾ. ಮೈಸೂರು ಮಂಜುನಾಥ್,  ಮೈಸೂರು ಸುಮಂತ್ ಮಂಜುನಾಥ್, ತಿರುಚಿ ಬಿ. ಹರಿಕುಮಾರ್, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಶ್ರೀ ವಿದ್ಯಾಶಂಕರ್‌ ಇದ್ದಾರೆ
ಶಾರದಾ ನಿನಾದ ಸಂಗೀತ ಕಾರ್ಯಕ್ರಮವನ್ನು ಮಾತಾಜೀ ಚೈತನ್ಯಮಯೀ ಅವರು ಉದ್ಘಾಟಿಸಿದರು. ಚಿತ್ರದಲ್ಲಿ  ಮೈಸೂರು ನಾಗರಾಜ್, ಡಾ. ಮೈಸೂರು ಮಂಜುನಾಥ್,  ಮೈಸೂರು ಸುಮಂತ್ ಮಂಜುನಾಥ್, ತಿರುಚಿ ಬಿ. ಹರಿಕುಮಾರ್, ಪಂಡಿತ್ ರಾಜೇಂದ್ರ ನಾಕೋಡ್ ಹಾಗೂ ಶ್ರೀ ವಿದ್ಯಾಶಂಕರ್‌ ಇದ್ದಾರೆ   

ತುಮಕೂರು: ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ‘ಶಾರದಾ ಮಾಧುರ್ಯ’ ಸಂಗೀತ ವೇದಿಕೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ಕೀರ್ತಿಶೇಷ ಎಸ್.ಮಹದೇವಪ್ಪ ಅವರ ಸ್ಮರಣಾರ್ಥ ‘ಶಾರದಾ ನಿನಾದ’ ವಿಶೇಷ ಸಂಗೀತ ಕಾರ್ಯಕ್ರಮ ಜರುಗಿತು.

ಈ ಸಂಗೀತ ಕಾರ್ಯಕ್ರಮವನ್ನು ಹಿರಿಯೂರಿನ ಶಾರದಾಶ್ರಮದ ಅಧ್ಯಕ್ಷೆ ಮಾತಾಜೀ ಚೈತನ್ಯಮಯೀ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತಾಜೀ ಅವರು ಕಾಶಿಯಲ್ಲಿ ಸಾಧನಾನಿರತರಾಗಿರುವ ಗಿರಿಜಮ್ಮ ಅವರು ರಚಿಸಿರುವ ‘ಕಾಶಿ ಪುಣ್ಯರಾಶಿ’ ಪುಸ್ತಕ ಬಿಡುಗಡೆ ಮಾಡಿದರು. ಆಶ್ರಮದ ಪುಸ್ತಕ ಮಾರಾಟ ಮಳಿಗೆಯ ಆ್ಯಪ್ ‘ಅರೈಸ್ ಅವೇಕ್’ ಸಹ ಬಿಡುಗಡೆ ಮಾಡಲಾಯಿತು.

ADVERTISEMENT

ಮೈಸೂರಿನ ವಿದ್ವಾನ್ ನಾಗರಾಜ್, ವಿದ್ವಾನ್ ಡಾ.ಮಂಜುನಾಥ್ ಹಾಗೂ ವಿದ್ವಾನ್ ಸುಮಂತ್ ಮಂಜುನಾಥ್‌ ಅವರು ಸಂಗೀತ ಕಛೇರಿ ನಡೆಸಿಕೊಟ್ಟರು. ತಿರುಚಿಯ ವಿದ್ವಾನ್ ಬಿ.ಹರಿಕುಮಾರ್‌ರವರು ಮೃದಂಗ ಹಾಗೂ ಬೆಂಗಳೂರಿನ ಪಂಡಿತ್ ರಾಜೇಂದ್ರ ನಾಕೋಡ್‌ ಅವರು ತಬಲದಲ್ಲಿ ಸಹಕರಿಸಿದರು.

ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತಿ ಅವರು ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.