ಶಿರಾ: ರಂಜಾನ್ ಹಬ್ಬದ ಸಮಯದಲ್ಲಿ ಮುಸ್ಲಿಮರು ಆಚರಿಸುವ ಉಪವಾಸ ವೃತದ ಹಿನ್ನೆಲೆಯಲ್ಲಿ ಆಯೋಜಿಸುವ ಇಫ್ತಾರ್ ಕೂಟಗಳು ಸೌಹಾರ್ದತೆಯ ಸಂಕೇತವಾಗಿದೆ ಎಂದು ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ನಗರದ ಶಾದಿ ಮಹಲ್‌ನಲ್ಲಿ ಭಾನುವಾರ ರಾತ್ರಿ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿ ಮಾತನಾಡಿದರು.
ದೇಶದಲ್ಲಿ ಹಿಂದೂ- ಮುಸ್ಲಿಮರು ಒಂದೇ ಎನ್ನುವ ಭಾವನೆ ಮೂಡಬೇಕು. ಹಬ್ಬದ ಆಚರಣೆಗಳು ಎಲ್ಲರಲ್ಲೂ ಶಾಂತಿ, ನೆಮ್ಮದಿ, ಒಗ್ಗಟ್ಟನ್ನು ಮೂಡಿಸುತ್ತವೆ. ಪ್ರತಿ ವರ್ಷ ಹಿಂದೂ ಮುಸ್ಲಿಮರು ಸೇರಿ ಇಫ್ತಾರ್ ಕೂಟ ಆಯೋಜಿಸುತ್ತಿರುವುದು ಸಂತಸದ ವಿಷಯ ಎಂದರು.
ನಗರಸಭೆ ಅಧ್ಯಕ್ಷ ಜೀಷಾನ್ ಮಹಮೂದ್, ಶಿರಾ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಆರ್.ಮಂಜುನಾಥ್, ತಹಶೀಲ್ದಾರ್ ಸಚ್ವಿದಾನಂದ ಕುಚನೂರು, ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ಲಾಖಾನ್, ನಗರಸಭೆ ಸದಸ್ಯ ಮಹಮದ್ ಜಾಫರ್, ಬುರ್ಹಾನ್ ಮಹಮೂದ್, ಫಯಾಜ್, ರಫಿವುಲ್ಲಾ, ಖಾದರ್, ಪರ್ಮಾನ್, ನೂರುದ್ದೀನ್, ಬಿ.ಎಂ.ರಾಧಾಕೃಷ್ಣ, ಗುಳಿಗೇನಹಳ್ಳಿ ನಾಗರಾಜು, ಮಣಿ, ಅಂಜನ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.