ಶಿರಾ: ತಾಲ್ಲೂಕಿನ ಕರೇಜವನಹಳ್ಳಿ ಟೋಲ್‌ಗೇಟ್ ಸಮೀಪ ಶುಕ್ರವಾರ ಭೀಮಹೆಜ್ಜೆ ರಥಯಾತ್ರೆಗೆ ಬಿಜೆಪಿ ಕಾರ್ಯಕರ್ತರು ಅದ್ದೂರಿ ಸ್ವಾಗತ ನೀಡಿದರು.
ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿ ಶತಮಾನ ತಂಬಿದ ಕಾರಣ ಬೆಂಗಳೂರಿನಿಂದ ನಿಪ್ಪಾಣಿಯವರೆಗೆ ಹಮ್ಮಿಕೊಂಡಿದ್ದ ಭೀಮ ಹೆಜ್ಜೆ ರಥಯಾತ್ರೆಯಲ್ಲಿ ಆಗಮಿಸಿದ್ದ ಮುಖಂಡರು ನಗರದ ಪ್ರವಾಸಿ ಮಂದಿರದ ವೃತ್ತದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಹಿರಿಯೂರಿಗೆ ರಥಯಾತ್ರೆ ತೆರಳಿತು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಪ್ರತಿ ಹಂತದಲ್ಲಿ ಅಪಮಾನ ಮಾಡಿದೆ. ಅವರು ಸಂಸತ್ತು ಪ್ರವೇಶ ಮಾಡಲು ಸಹ ಸಾಧ್ಯವಾಗದಂತೆ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಅವರು ನಿಧನರಾದ ಸಮಯದಲ್ಲಿ ಅವರಿಗೆ ಗೌರವ ನೀಡದೆ ಅಪಮಾನಿಸಿದೆ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸಿದೆ ಎಂದರು.
ರಥಯಾತ್ರೆಯಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಮುಖಂಡರಾದ ಹನುಮಂತೇಗೌಡ, ಅನಿಲ್ ಕುಮಾರ್, ಬರಗೂರು ಶಿವಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.