ADVERTISEMENT

ಸ್ಮಾರ್ಟ್ ಸಿಟಿ ಅಪ್ರಯೋಜಕ: ಸಿಪಿಐಎಂ ಟೀಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2021, 4:15 IST
Last Updated 4 ಅಕ್ಟೋಬರ್ 2021, 4:15 IST
ತುಮಕೂರಿನಲ್ಲಿ ಸಿಪಿಐಎಂ ಕೈಗಾರಿಕಾ ಕಾರ್ಮಿಕರ ಘಟಕದ ಸಮ್ಮೇಳನದಲ್ಲಿ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಾರ್ಮಿಕ ಮುಖಂಡರಾದ ಶಿವಕುಮಾರಸ್ವಾಮಿ, ಲೋಕೇಶ್, ರಂಗಧಾಮಯ್ಯ, ಗಿರೀಶ್ ಇದ್ದರು
ತುಮಕೂರಿನಲ್ಲಿ ಸಿಪಿಐಎಂ ಕೈಗಾರಿಕಾ ಕಾರ್ಮಿಕರ ಘಟಕದ ಸಮ್ಮೇಳನದಲ್ಲಿ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಕಾರ್ಮಿಕ ಮುಖಂಡರಾದ ಶಿವಕುಮಾರಸ್ವಾಮಿ, ಲೋಕೇಶ್, ರಂಗಧಾಮಯ್ಯ, ಗಿರೀಶ್ ಇದ್ದರು   

ತುಮಕೂರು: ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಯೋಜನೆಯು ನಮಗೆ ಹೊಂದಿಕೊಳ್ಳದ ಅಪ್ರಯೋಜಕ ವಿದೇಶಿ ಮಾದರಿಯ ಕಾಪಿಯಾಗಿದೆ ಎಂದು ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಸೈಯದ್ ಮುಜೀಬ್ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜನ ಚಳವಳಿ ಕೇಂದ್ರದಲ್ಲಿ ಸಿಪಿಐಎಂ ಕೈಗಾರಿಕಾ ಕಾರ್ಮಿಕರ ಘಟಕದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಯೋಜನೆ ರೂಪಿಸುವ ಹಂತದಲ್ಲಿ ಇದನ್ನು ವಿರೋಧಿಸಿದಾಗ ಮೌನವಾಗಿದ್ದವರು, ಈಗ ಜಾರಿ ಹಂತದಲ್ಲಿ ಕೂಗಾಡಿದರೇನು ಪ್ರಯೋಜನ ಎಂದು ಪ್ರಶ್ನಿಸಿದರು.

ADVERTISEMENT

ಧರ್ಮದ ಹೆಸರಿನಲ್ಲಿ ಅಮಲೇರಿಸಿಕೊಂಡು ಯುವಜನತೆಯನ್ನು ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಕೊಲೆಗಡುಕತನವನ್ನು ಲಜ್ಜೆ ಇಲ್ಲದೆ ಮಾತನಾಡುತ್ತಿದ್ದಾರೆ ಎಂದರು.

ಕಾರ್ಮಿಕ ಮುಖಂಡ ಶಿವಕುಮಾರಸ್ವಾಮಿ ಮಾತನಾಡಿ, ದುಡಿಯುವವರ ಸಂಕಟಗಳಿಗೆ ಸ್ಪಂದಿಸದೆ ಲಾಭ ಮಾತ್ರ ಲೆಕ್ಕ ಹಾಕುವ ಅಮಾನವೀಯತೆ ಕಂಡುಬರುತ್ತಿದೆ ಎಂದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ‘ಕೋವಿಡ್ ಸಂಕಟಗಳ ನಡುವೆ ಸರ್ಕಾರ ಬೆಲೆ ಏರಿಕೆ ಮಾಡಿದೆ. ರೈತ, ಕಾರ್ಮಿಕ, ಜನ ವಿರೋಧಿ ನೀತಿಗಳು ಬದುಕನ್ನು ಮತ್ತಷ್ಟು ದುಸ್ತರಗೊಳಸಿವೆ’ ಎಂದು ಆರೋಪಿಸಿದರು.

ಸಿಪಿಐಎಂ ನಗರ ಸಮಿತಿಯ ಷಣ್ಮಖಪ್ಪ, ಕಾರ್ಮಿಕರ ಮುಖಂಡರಾದ ಲೋಕೇಶ್, ರಂಗಧಾಮಯ್ಯ ಇದ್ದರು. ಕೈಗಾರಿಕಾ ಕಾರ್ಮಿಕರ ಘಟಕ ಕಾರ್ಯದರ್ಶಿಯಾಗಿ ಗಿರೀಶ್ ಅವರನ್ನು ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.