ADVERTISEMENT

ಹೌದು ಸ್ವಾಮಿ, ಇದು ‘ಸ್ಮಾರ್ಟ್‌ ವಾರ್ಡ್‌’!

ಕುಸಿದ ರಸ್ತೆ, ಹದಗೆಟ್ಟ ಫುಟ್‌ಪಾತ್‌; ಕುಡುಕರ ಅಡ್ಡೆಯಾದ ವ್ಯಾಪಾರ ವಲಯ

​ಪ್ರಜಾವಾಣಿ ವಾರ್ತೆ
Published 25 ಜನವರಿ 2025, 4:40 IST
Last Updated 25 ಜನವರಿ 2025, 4:40 IST
ತುಮಕೂರಿನ ಎಂ.ಜಿ.ರಸ್ತೆಯ ವ್ಯಾಪಾರ ವಲಯದಲ್ಲಿ ಕಸದ ರಾಶಿ
ತುಮಕೂರಿನ ಎಂ.ಜಿ.ರಸ್ತೆಯ ವ್ಯಾಪಾರ ವಲಯದಲ್ಲಿ ಕಸದ ರಾಶಿ   

ತುಮಕೂರು: ‘ಸ್ಮಾರ್ಟ್ ಸಿಟಿ’ ಯೋಜನೆಯಡಿ ಆಯ್ಕೆಯಾಗಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಸಾಕ್ಷಿಯಾಗಿದ್ದ 5ನೇ ವಾರ್ಡ್‌ ಯೋಜನೆ ಮುಗಿಯುವ ಮುನ್ನವೇ ಹದಗೆಟ್ಟಿದೆ.

ಕುಸಿದ ರಸ್ತೆ, ಕಿತ್ತು ಹೋದ ಫುಟ್‌ಪಾತ್‌, ಹಾಳಾದ ವಿದ್ಯುತ್‌ ಕಂಬ, ಬೆಳಗದ ವಿದ್ಯುತ್‌ ದೀಪಗಳು, ಇನ್ನೂ ಡಾಂಬರೀಕರಣ, ಕಾಂಕ್ರಿಟ್‌ ಕಾಣದ ಬೀದಿ ರಸ್ತೆಗಳು... ಇದು ವಾರ್ಡ್‌ನ ಸದ್ಯದ ಪರಿಸ್ಥಿತಿ. ಸ್ಮಾರ್ಟ್‌ ಸಿಟಿ ಯೋಜನೆಯಡಿ ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳಲ್ಲಿ ಮೂರು ವರ್ಷ ಕಳೆಯುವ ಮುನ್ನ ಗುಂಡಿಗಳು ಬಿದ್ದಿವೆ. ಫುಟ್‌ಪಾತ್‌ನಲ್ಲಿ ಪಾದಚಾರಿಗಳು ಓಡಾಡಲು ಸಾಧ್ಯವಾಗುತ್ತಿಲ್ಲ.

ಪ್ರಮುಖ ವಾಣಿಜ್ಯ ಕೇಂದ್ರಗಳಾದ ಎಂ.ಜಿ.ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಹೊರಪೇಟೆ, ಕೆ.ಆರ್‌.ಬಡಾವಣೆ, ಬಾರ್‌ಲೈನ್‌ ರಸ್ತೆ, ಪಾಂಡುರಂಗ ನಗರ ವಾರ್ಡ್‌ ವ್ಯಾಪ್ತಿಗೆ ಸೇರುತ್ತವೆ. ನಿತ್ಯ ನೂರಾರು ವಾಹನಗಳು ಸಂಚರಿಸುವ, ಹೆಚ್ಚಿನ ಜನ ಸಂದಣಿ ಸೇರುವ ಪ್ರದೇಶಗಳಲ್ಲಿ ಗುಣಮಟ್ಟದ ಕಾಮಗಾರಿ ನಡೆಸಿಲ್ಲ. ಸ್ಮಾರ್ಟ್‌ ಸಿಟಿ ಯೋಜನೆಯಡಿ ಮಾಡಿದ ಎಲ್ಲ ಕೆಲಸಗಳು ಕಳಪೆಯಾಗಿವೆ ಎಂಬುವುದು ಮಹಾನಗರ ಪಾಲಿಕೆಯ ಮಾಜಿ ಸದಸ್ಯರ ಆರೋಪ.

ADVERTISEMENT

ಅಕ್ರಮ ಚಟುವಟಿಕೆ: ನಗರದ ಎಂ.ಜಿ.ರಸ್ತೆಯಲ್ಲಿ ಸ್ಮಾರ್ಟ್‌ ಸಿಟಿ ಮತ್ತು ಮಹಾನಗರ ಪಾಲಿಕೆಯಿಂದ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ಮೂರು ವ್ಯಾಪಾರ ವಲಯಗಳು ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿವೆ. ನಗರದ ಎಸ್‌.ಎಸ್‌.ವೃತ್ತದ ಬಳಿ ನಿರ್ಮಿಸಿರುವ ಫುಡ್‌ಜೋನ್‌ ಮಾದರಿಯಲ್ಲಿಯೇ ಎಂ.ಜಿ.ರಸ್ತೆಗೆ ಹೊಂದಿಕೊಂಡ ಪ್ರದೇಶದಲ್ಲಿ ಫುಟ್‌ಪಾತ್‌ ವ್ಯಾಪಾರಿಗಳಿಗೆ ವ್ಯವಸ್ಥಿತವಾದ ಮಳಿಗೆ ನೀಡುವ ಉದ್ದೇಶದಿಂದ ಕೆಲಸ ಪ್ರಾರಂಭಿಸಲಾಗಿತ್ತು. ಪ್ರಸ್ತುತ ಈ ಜಾಗ ಗಬ್ಬು ನಾರುತ್ತಿದೆ. ಮದ್ಯದ ಬಾಟಲಿಗಳು, ಎಂ.ಜಿ.ರಸ್ತೆಯ ವಿವಿಧ ಮಳಿಗೆಗಳ ತ್ಯಾಜ್ಯ ಇಲ್ಲಿ ತುಂಬಿಕೊಂಡಿದೆ.

ವಿವೇಕಾನಂದ ರಸ್ತೆಯಲ್ಲಿ (ಶಿರಾಣಿ ರಸ್ತೆ) ಬೀದಿ ಬದಿ ವ್ಯಾಪಾರಿಗಳಿಗೆ ಬದುಕಿನ ಮಾರ್ಗ ಕಲ್ಪಿಸುವ ನಿಟ್ಟಿನಲ್ಲಿ ವ್ಯಾಪಾರ ವಲಯ ನಿರ್ಮಿಸಲಾಗಿತ್ತು. ಈವರೆಗೆ ಕಾಮಗಾರಿ ಪೂರ್ಣಗೊಳಿಸಿ ಹಂಚಿಕೆ ಮಾಡಿಲ್ಲ. ಇಲ್ಲಿ ಗುಡ್ಡೆ ಹಾಕಿರುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುತ್ತಿಲ್ಲ. ‘ವ್ಯಾಪಾರ ವಲಯವನ್ನು ಪಾರ್ಕಿಂಗ್‌ಗೆ ನೀಡುವ ಉದ್ದೇಶವಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಪಾಲಿಕೆಯ ಅಧಿಕಾರಿಗಳು ಹೇಳುತ್ತಲೇ ಬಂದಿದ್ದಾರೆ. ಕೆಲಸ ಮಾತ್ರ ವೇಗ ಪಡೆದುಕೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

‘ಪಾಲಿಕೆಯ ಅಧಿಕಾರಿಗಳು ವ್ಯಾಪಾರ ವಲಯದ ಬಗ್ಗೆ ಸಂಪೂರ್ಣವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಅಭಿವೃದ್ಧಿಪಡಿಸಿರುವ ಸ್ಥಳವನ್ನು ಇತ್ತ ವಾಹನಗಳ ನಿಲುಗಡೆಗೂ ನೀಡದೆ, ಅತ್ತ ಬೀದಿ ಬದಿ ವ್ಯಾಪಾರಿಗಳಿಗೂ ಕೊಡದೆ ಖಾಲಿ ಬಿಟ್ಟಿದ್ದಾರೆ. ವ್ಯಾಪಾರಕ್ಕೆ ಒಂದು ಸೂಕ್ತ ಸ್ಥಳ ಸಿಗಲಿದೆ ಎಂಬ ಆಸೆ ಹೊತ್ತಿದ್ದ ಫುಟ್‌ಪಾತ್‌ ವ್ಯಾಪಾರಿಗಳಿಗೆ ನಿರಾಸೆ ಎದುರಾಗಿದೆ’ ಎಂದು ಫುಟ್‌ಪಾತ್‌ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಸೀಂ ಅಕ್ರಂ ಬೇಸರ ವ್ಯಕ್ತಪಡಿಸಿದರು.

ಅಭಿವೃದ್ಧಿ ಆಗಿದ್ದೇನು?

  • ಪಾಂಡುರಂಗ ನಗರದಲ್ಲಿ ವಾಟರ್‌ ಟ್ಯಾಂಕ್‌ ನಿರ್ಮಾಣ

  • ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭ

  • 3 ಅಂಗನವಾಡಿ ಕಟ್ಟಡ ನಿರ್ಮಾಣ

  • ಸ್ಮಾರ್ಟ್‌ ಸಿಟಿಯಲ್ಲಿ ವಿವಿಧ ಕಾಮಗಾರಿ

  • ಕೆಎಸ್‌ಆರ್‌ಟಿಸಿ ನೂತನ ಬಸ್‌ ನಿಲ್ದಾಣ

ಸಮಸ್ಯೆಗಳೇನು?

  • ವಾರ್ಡ್‌ ವ್ಯಾಪ್ತಿಯಲ್ಲಿ ಪಿಎಚ್‌ಸಿ ಇಲ್ಲ

  • ವಾಹನ ನಿಲುಗಡೆ ಸಮಸ್ಯೆ

  • ಉಪನೋಂದಣಾಧಿಕಾರಿ ಕಚೇರಿ ಬಳಿ ಅಡ್ಡಾದಿಡ್ಡಿ ವಾಹನ ನಿಲುಗಡೆ

  • ಬಹುತೇಕ ರಸ್ತೆಗಳಲ್ಲಿ ಅಧ್ವಾನ

'ನಾಯಿ ಕಾಟ ಹೆಚ್ಚಳ'

ನಾಯಿಗಳ ಕಾಟ ಹೆಚ್ಚಾಗಿದೆ. ಒಂದೇ ಬಾರಿ 10ಕ್ಕೂ ಹೆಚ್ಚು ನಾಯಿಗಳು ದಾಳಿ ನಡೆಸುತ್ತವೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಭಯವಾಗುತ್ತದೆ. ಶಾಲೆಗೆ ಕಳುಹಿಸುವ ವೇಳೆ ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ದಿನ ಇದೇ ಸಮಸ್ಯೆ ಕಾಡುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ.

- ನಾಗರತ್ನಮ್ಮ, ಎಂ.ಜಿ.ರಸ್ತೆ

‘ರಸ್ತೆ ದುರಸ್ತಿ’

ಚೆನ್ನಾಗಿರುವ ರಸ್ತೆಗಳನ್ನು ಅಗೆದು ಸ್ಮಾರ್ಟ್‌ ಸಿಟಿಯಡಿ ಅಭಿವೃದ್ಧಿಪಡಿಸಿದರು. ಆದರೆ ಗುಂಡಿ ಬಿದ್ದ, ಡಾಂಬರೀಕರಣ ಕಾಣದ ರಸ್ತೆ ದುರಸ್ತಿಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಒಂದೇ ರಸ್ತೆಯನ್ನು ಎರಡೆರಡು ಬಾರಿ ಅಗೆದರು. ತೆರಿಗೆ ಹಣವನ್ನು ಸುಮ್ಮನೆ ಪೋಲು ಮಾಡಿದರು.

– ಗಂಗಣ್ಣ, ಅರಳೇಪಾಳ್ಯ

‘ಸಮಸ್ಯೆಗೆ ಸ್ಪಂದನೆ’

ಮಹಾನಗರ ಪಾಲಿಕೆ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕುಡಿಯುವ ನೀರಿಗೂ ಹೆಚ್ಚಿನ ತೊಂದರೆಯಾಗುತ್ತಿಲ್ಲ.

– ಇರ್ಫಾನ್, ಹೊರಪೇಟೆ

‘ಕಸದ್ದೇ ಸಮಸ್ಯೆ’

ಖಾಲಿ ಜಾಗದಲ್ಲಿ ಕಸ ಹಾಕುವುದರಿಂದ ಸೊಳ್ಳೆ, ಹೆಗ್ಗಣ ಜಾಸ್ತಿಯಾಗಿವೆ. ಅಂಗಡಿ, ಮನೆಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇದರಿಂದ ಈ ಭಾಗದ ಜನರು ಮನೆಯಿಂದ ಹೊರ ಬರಲು ಆಗುತ್ತಿಲ್ಲ.

– ರಾಜೇಶ್, ಹೊರಪೇಟೆ

‘ಶೌಚಾಲಯ ಇಲ್ಲ’

ಐದನೇ ವಾರ್ಡ್‌ ವ್ಯಾಪ್ತಿಯ ಕೆ.ಆರ್‌.ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿಲ್ಲ. ಬಾರ್‌ಲೈನ್‌ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಮೂತ್ರ ವಿಸರ್ಜನೆಗೆ ಬಯಲೇ ಗತಿ. ಸ್ಮಾರ್ಟ್‌ ಸಿಟಿಯಿಂದ ಜನರ ಬಳಕೆಗೆ ಒಂದು ಶೌಚಾಲಯ ನಿರ್ಮಿಸಬೇಕು.

– ಕೆಂಪಣ್ಣ, ಕೆ.ಆರ್‌.ಬಡಾವಣೆ

‘ಬಸ್‌ ನಿಲ್ದಾಣ’

ವಾರ್ಡ್‌ನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಸ್‌ ನಿಲ್ದಾಣ, ಗ್ರಂಥಾಲಯ ನಿರ್ಮಿಸಲಾಗಿದೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಿ, ಅವರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡಲಾಗುತ್ತಿದೆ.

– ಟಿ.ಎಂ.ಮಹೇಶ್‌, ಮಾಜಿ ಸದಸ್ಯ, ಮಹಾನಗರ ಪಾಲಿಕೆ

ತುಮಕೂರಿನ ಎಂಪ್ರೆಸ್‌ ಕಾಲೇಜಿನ ಮುಂಭಾಗದ ಅಶೋಕ ರಸ್ತೆಯ ಫುಟ್‌ಪಾತ್‌ ಕುಸಿದಿರುವುದು
ಹೊರಪೇಟೆಯ ಖಾಲಿ ಜಾಗದಲ್ಲಿ ಕಸ ಹಾಕಿರುವುದು
ಎಂ.ಜಿ.ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡುವ ಬೀಡಾಡಿ ದನಗಳು

Cut-off box - ನಾಯಿ ಕಾಟ ಹೆಚ್ಚಳ ನಾಯಿಗಳ ಕಾಟ ಹೆಚ್ಚಾಗಿದೆ. ಒಂದೇ ಬಾರಿ 10ಕ್ಕೂ ಹೆಚ್ಚು ನಾಯಿಗಳು ದಾಳಿ ನಡೆಸುತ್ತವೆ. ಮಕ್ಕಳನ್ನು ಮನೆಯಿಂದ ಹೊರಗೆ ಬಿಡಲು ಭಯವಾಗುತ್ತದೆ. ಶಾಲೆಗೆ ಕಳುಹಿಸುವ ವೇಳೆ ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಪ್ರತಿ ದಿನ ಇದೇ ಸಮಸ್ಯೆ ಕಾಡುತ್ತಿದೆ. ಮಹಾನಗರ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪರಿಹಾರ ಸಿಕ್ಕಿಲ್ಲ. ನಾಗರತ್ನಮ್ಮ ಎಂ.ಜಿ.ರಸ್ತೆ ** ರಸ್ತೆ ದುರಸ್ತಿ ಚೆನ್ನಾಗಿರುವ ರಸ್ತೆಗಳನ್ನು ಅಗೆದು ಸ್ಮಾರ್ಟ್‌ ಸಿಟಿಯಡಿ ಅಭಿವೃದ್ಧಿಪಡಿಸಿದರು. ಆದರೆ ಗುಂಡಿ ಬಿದ್ದ ಡಾಂಬರೀಕರಣ ಕಾಣದ ರಸ್ತೆ ದುರಸ್ತಿಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಒಂದೇ ರಸ್ತೆಯನ್ನು ಎರಡೆರಡು ಬಾರಿ ಅಗೆದರು. ತೆರಿಗೆ ಹಣವನ್ನು ಸುಮ್ಮನೆ ಪೋಲು ಮಾಡಿದರು. ಗಂಗಣ್ಣ ಅರಳೇಪಾಳ್ಯ ** ಸಮಸ್ಯೆಗೆ ಸ್ಪಂದನೆ ಮಹಾನಗರ ಪಾಲಿಕೆ ಸದಸ್ಯರು ಜನರ ಸಮಸ್ಯೆಗೆ ಸ್ಪಂದಿಸುತ್ತಾರೆ. ರಸ್ತೆ ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ತಮ್ಮ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕುಡಿಯುವ ನೀರಿಗೂ ಹೆಚ್ಚಿನ ತೊಂದರೆಯಾಗುತ್ತಿಲ್ಲ. ಇರ್ಫಾನ್ ಹೊರಪೇಟೆ ** ಕಸದ್ದೇ ಸಮಸ್ಯೆ ಖಾಲಿ ಜಾಗದಲ್ಲಿ ಕಸ ಹಾಕುವುದರಿಂದ ಸೊಳ್ಳೆ ಹೆಗ್ಗಣ ಜಾಸ್ತಿಯಾಗಿವೆ. ಅಂಗಡಿ ಮನೆಗಳ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ. ಇದರಿಂದ ಈ ಭಾಗದ ಜನರು ಮನೆಯಿಂದ ಹೊರ ಬರಲು ಆಗುತ್ತಿಲ್ಲ. ರಾಜೇಶ್ ಹೊರಪೇಟೆ ** ಶೌಚಾಲಯ ಇಲ್ಲ ಐದನೇ ವಾರ್ಡ್‌ ವ್ಯಾಪ್ತಿಯ ಕೆ.ಆರ್‌.ಬಡಾವಣೆಯಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಮಾಡಿಲ್ಲ. ಬಾರ್‌ಲೈನ್‌ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಇಲ್ಲಿಗೆ ಸಾವಿರಾರು ಜನರು ಭೇಟಿ ನೀಡುತ್ತಾರೆ. ಮೂತ್ರ ವಿಸರ್ಜನೆಗೆ ಬಯಲೇ ಗತಿ. ಸ್ಮಾರ್ಟ್‌ ಸಿಟಿಯಿಂದ ಜನರ ಬಳಕೆಗೆ ಒಂದು ಶೌಚಾಲಯ ನಿರ್ಮಿಸಬೇಕು. ಕೆಂಪಣ್ಣ ಕೆ.ಆರ್‌.ಬಡಾವಣೆ ** ಬಸ್‌ ನಿಲ್ದಾಣ ಗ್ರಂಥಾಲಯ ವಾರ್ಡ್‌ನಲ್ಲಿ ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಸ್‌ ನಿಲ್ದಾಣ ಗ್ರಂಥಾಲಯ ನಿರ್ಮಿಸಲಾಗಿದೆ. ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಜನರ ಸಮಸ್ಯೆಗೆ ಸ್ಪಂದಿಸಿ ಅವರ ಬೇಡಿಕೆಗೆ ಅನುಗುಣವಾಗಿ ಕೆಲಸ ಮಾಡಲಾಗುತ್ತಿದೆ. ಟಿ.ಎಂ.ಮಹೇಶ್‌ ಮಾಜಿ ಸದಸ್ಯ ಮಹಾನಗರ ಪಾಲಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.