ADVERTISEMENT

ತುಮಕೂರು: ದೇವಾಲಯದಲ್ಲಿದ್ದ ಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 5:29 IST
Last Updated 9 ಜನವರಿ 2020, 5:29 IST
ತುಮಕೂರು ಜಯನಗರದ ಶ್ರೀ ಸಾಯಿ ಬಾಬಾ ಭಜನಾ ಮಂದಿರದ ಕಾಂಪೌಂಡ್‌ನಲ್ಲಿ ಸೇರಿಕೊಂಡಿದ್ದ ಆಲಿವ್ ಬೆನ್ನೆಣು (ಆಲಿವ್ ಕೀಲ್‌ಬ್ಯಾಕ್) ಹಾವು.
ತುಮಕೂರು ಜಯನಗರದ ಶ್ರೀ ಸಾಯಿ ಬಾಬಾ ಭಜನಾ ಮಂದಿರದ ಕಾಂಪೌಂಡ್‌ನಲ್ಲಿ ಸೇರಿಕೊಂಡಿದ್ದ ಆಲಿವ್ ಬೆನ್ನೆಣು (ಆಲಿವ್ ಕೀಲ್‌ಬ್ಯಾಕ್) ಹಾವು.   

ತುಮಕೂರು: ಜಯನಗರದ ಶ್ರೀ ಸಾಯಿ ಬಾಬಾ ಭಜನಾ ಮಂದಿರದ ಕಾಂಪೌಂಡ್‌ನಲ್ಲಿ ಸೇರಿಕೊಂಡಿದ್ದ ಆಲಿವ್ ಬೆನ್ನೆಣು (ಆಲಿವ್ ಕೀಲ್‌ಬ್ಯಾಕ್) ಹಾವನ್ನು ವಾರ್ಕೊ ಸಂಸ್ಥೆಯ ಉರಗ ತಜ್ಞ ಮನು ಅಗ್ನಿವಂಶಿ ಸುರಕ್ಷಿತವಾಗಿ ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.

ವಿಷಕಾರಿಯಲ್ಲದ ಈ ಹಾವು ನೀರು ಹಾವಿನ ಉಪಜಾತಿ ಹಾವು. ನಗರ ಪ್ರದೇಶದಲ್ಲಿ ಈ ಹಾವು ಸಿಗುವುದು ಅಪರೂಪ. ನಮ್ಮ ಪರಿಸರದ ಸಮತೋಲನಕ್ಕೆ ಹಾವುಗಳ ಪಾತ್ರ ಅವಶ್ಯಕ, ಹಾವುಗಳು ನಗರ ಪ್ರದೇಶದಲ್ಲಿ ಕಂಡರೆ ಹೊಡೆದು ಸಾಯಿಸುವ ಪ್ರಯತ್ನವನ್ನು ಮಾಡಬಾರದು ಎಂದು ಮನು ಅವರು ಮನವಿ ಮಾಡಿದ್ದಾರೆ.

ಅಲ್ಲದೆ, ಹಾವುಗಳ ರಕ್ಷಣೆ ಮಾಡಲು ವಾರ್ಕೊ ಸಂಸ್ಥೆಗೆ99645 19576ಕರೆ ಮಾಡುವಂತೆ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.