ADVERTISEMENT

ಅಂಗಡಿಯ ಫ್ರಿಡ್ಜ್‌ನಲ್ಲಿದ್ದ ನಾಗರಹಾವು ರಕ್ಷಣೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 20:10 IST
Last Updated 7 ಜೂನ್ 2019, 20:10 IST
ಬಾಣಸಂದ್ರ ಗ್ರಾಮದ ರೈಲ್ವೇ ನಿಲ್ದಾಣ ಹಿಂಭಾಗದ ರಂಗಸ್ವಾಮಿ ಅಂಗಡಿಯ ಫ್ರಿಡ್ಜ್‌ನಲ್ಲಿದ್ದ ನಾಗರಹಾವನ್ನು ಉರಗ ತಜ್ಞ ಬಿ.ಜಿ.ರವಿಕುಮಾರ್ ಹಿಡಿದು ರಕ್ಷಿಸಿದ್ದಾರೆ
ಬಾಣಸಂದ್ರ ಗ್ರಾಮದ ರೈಲ್ವೇ ನಿಲ್ದಾಣ ಹಿಂಭಾಗದ ರಂಗಸ್ವಾಮಿ ಅಂಗಡಿಯ ಫ್ರಿಡ್ಜ್‌ನಲ್ಲಿದ್ದ ನಾಗರಹಾವನ್ನು ಉರಗ ತಜ್ಞ ಬಿ.ಜಿ.ರವಿಕುಮಾರ್ ಹಿಡಿದು ರಕ್ಷಿಸಿದ್ದಾರೆ   

ತುರುವೇಕೆರೆ: ತಾಲ್ಲೂಕಿನ ಬಾಣಸಂದ್ರ ಗ್ರಾಮದ ರೈಲ್ವೆ ನಿಲ್ದಾಣ ಹಿಂಭಾಗದ ರಂಗಸ್ವಾಮಿ ಅಂಗಡಿಯ ಫ್ರಿಡ್ಜ್‌ನಲ್ಲಿದ್ದ ನಾಗರಹಾವನ್ನು ಉರಗ ತಜ್ಞ ಬಿ.ಜಿ.ರವಿಕುಮಾರ್ ಹಿಡಿದು ರಕ್ಷಿಸಿದ್ದಾರೆ.

ರಂಗಸ್ವಾಮಿ ಅವರ ಪತ್ನಿ ಶಶಿಕಲಾ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಗುರುವಾರ ಸಂಜೆ ಗ್ರಾಹಕರೊಬ್ಬರು ತಂಪು ಪಾನೀಯ ಕೇಳಿದ್ದಾರೆ. ಆಗ ಶಶಿಕಲಾ ಫ್ರಿಡ್ಜ್ ತೆರೆದಾಗ ಹಾವು ಹೆಡೆಬಿಚ್ಚಿದೆ. ಭಯಗೊಂಡ ಶಶಿಕಲಾ ದಿಢೀರನೆ ಫ್ರಿಡ್ಜ್ ಬಾಗಿಲು ಮುಚ್ಚಿ ಉರಗತಜ್ಞ ರವಿಕುಮಾರ್ ಅವರಿಗೆ ಕರೆ ಮಾಡಿ ತಿಳಿಸಿದರು.

ಸ್ಥಳಕ್ಕೆ ಬಂದ ರವಿಕುಮಾರ್ ಫ್ರಿಡ್ಜ್‌ನಲ್ಲಿ ಎಲ್ಲ ವಸ್ತುಗಳನ್ನು ತೆಗೆದು ಹಾಕಿ ಅದರಲ್ಲಿದ್ದ ನಾಲ್ಕುವರೆ ಅಡಿ ಉದ್ದದ ನಾಗರ ಹಾವನ್ನು ಹಿಡಿದು ಕೋಣನ ಕಾವಲಿನ ಅರಣ್ಯಕ್ಕೆ ಬಿಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.