ADVERTISEMENT

ತಿಪಟೂರು: ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ- ನ್ಯಾಯಾಧೀಶ ಬಿ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 5:48 IST
Last Updated 1 ಡಿಸೆಂಬರ್ 2021, 5:48 IST
ತಿಪಟೂರಿನಲ್ಲಿ ವಕೀಲರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ನ್ಯಾಯಾಧೀಶ ಬಿ.ಶಿವಕುಮಾರ್ ಚಾಲನೆ ನೀಡಿದರು. ನ್ಯಾಯಾಧೀಶರಾದ ನೂರುನ್ನಿಸ್ಸಾ, ಎಸ್.ಚಂದನ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ದಯಾನಂದ್, ಉಪಾಧ್ಯಕ್ಷ ಸುರಬಿದೇನು, ಕಾರ್ಯದರ್ಶಿ ಬಿ.ಎನ್.ಅಜಯ್ ಇದ್ದರು

ತಿಪಟೂರು: ದೇಹದ ಸದೃಢತೆ, ಉತ್ತಮ ಆರೋಗ್ಯಕ್ಕೆ ಕ್ರೀಡೆ ಸಹಕಾರಿ ಎಂದು ನ್ಯಾಯಾಧೀಶ ಬಿ.ಶಿವಕುಮಾರ್ ಹೇಳಿದರು.

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ಮಂಗಳವಾರ ವಕೀಲರ ದಿನಾಚಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.

ನಿತ್ಯ ಒಂದಿಲ್ಲೊಂದು ಜಂಜಾಟದಲ್ಲಿ ತೊಡಗಿಕೊಂಡಿರುವ ಮನುಷ್ಯನಿಗೆ ಕೆಲಕಾಲ ದೇಹದ ಆರೋಗ್ಯಕ್ಕೂ ಆದ್ಯತೆ ನೀಡಬೇಕಿದೆ. ಈ ನಿಟ್ಟಿನಲ್ಲಿ ವಕೀಲರು ಬೆಳಿಗ್ಗೆ ಕೆಲ ಗಂಟೆ ಬಿಡುವು ಮಾಡಿಕೊಂಡು ಆರೋಗ್ಯದ ಕಾಳಜಿ ವಹಿಸಬೇಕು. ಕ್ರೀಡೆಯಲ್ಲಿ ಸೋಲು- ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.

ADVERTISEMENT

ನ್ಯಾಯಾಧೀಶರಾದ ನೂರುನ್ನಿಸ್ಸಾ, ಎಸ್.ಚಂದನ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್.ದಯಾನಂದ್, ಉಪಾಧ್ಯಕ್ಷ ಸುರಬಿಧೇನು, ಕಾರ್ಯದರ್ಶಿ ಬಿ.ಎನ್.ಅಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.