ADVERTISEMENT

ಎಸ್ಸೆಸ್ಸೆಲ್ಸಿ; ಮರು ಮೌಲ್ಯಮಾಪನ ತಾಲ್ಲೂಕಿಗೆ ಪ್ರಥಮ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 2:19 IST
Last Updated 8 ಸೆಪ್ಟೆಂಬರ್ 2020, 2:19 IST
ಮೋಹನ್ ಕುಮಾರ್
ಮೋಹನ್ ಕುಮಾರ್   

ಮಧುಗಿರಿ: ಪಟ್ಟಣದ ಚಿರೆಕ್ ಪಬ್ಲಿಕ್ ಶಾಲೆ ವಿದ್ಯಾರ್ಥಿ ಎನ್.ಮೋಹನ್ ಕುಮಾರ್ ಎಸ್ಸೆಸ್ಸೆಲ್ಸಿ ಮರು ಮೌಲ್ಯ ಮಾಪನದಲ್ಲಿ 622 ಅಂಕ ಪಡೆಯುವ ಮೂಲಕ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ಈ ಮೊದಲು 616 ಅಂಕಗಳಿಸಿದ್ದರು. ಮರು ಮೌಲ್ಯ ಮಾಪನದಲ್ಲಿ 6 ಅಂಕಗಳು ಹೆಚ್ಚುವರಿಯಾಗಿ ಬಂದಿವೆ. ಶಿರಾ ತಾಲ್ಲೂಕು ಗುಮ್ಮನಹಳ್ಳಿಯ ರೆಹಾನ್ ಶಾಲೆಯ ವಿದ್ಯಾರ್ಥಿ ಆರ್.ಪ್ರಿಯಾಂಕಾ 622 ಅಂಕಗಳಿಸಿ ಮಧುಗಿರಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದರು.

ಚಿರೆಕ್ ಶಾಲೆಯ ಮತ್ತೊಬ್ಬ ವಿದ್ಯಾರ್ಥಿ ಎಚ್.ಆರ್.ದೀಕ್ಷಿತ್ ಗೌಡ 617 ಅಂಕಗಳಿಸಿದ್ದರು. ಮರು ಮೌಲ್ಯ ಮಾಪನದಲ್ಲಿ 4 ಅಂಕ ಪಡೆದು 621 ಅಂಕಗಳನ್ನು ಗಳಿಸುವ ಮೂಲಕ ಶೈಕ್ಷಣಿಕ ಜಿಲ್ಲೆಗೆ ದ್ವಿತೀಯ ಸ್ಥಾನ ಹಂಚಿಕೊಂಡಿದ್ದಾರೆ. ಶಿರಾ ತಾಲ್ಲೂಕಿನ ಭುವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಬಿ.ಪುಷ್ಪ ಲತಾ 621 ಅಂಕಗಳಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.