ADVERTISEMENT

ನೀರಲ್ಲಿ ನಿಂತು ಪ್ರತಿಭಟನೆ; ಅಕ್ಕಮ್ಮನಹಳ್ಳಿಯಲ್ಲಿ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 3:47 IST
Last Updated 17 ಜುಲೈ 2021, 3:47 IST
ಪಾವಗಡ ತಾಲ್ಲೂಕಿನ ದೊಮ್ಮತಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಮ್ಮನಹಳ್ಳಿಯ ರಸ್ತೆಗಳು ಹಾಳಾಗಿರುವುದನ್ನು ಖಂಡಿಸಿ ಜಲಾವೃತ ರಸ್ತೆಯಲ್ಲಿ ನಿಂತು ಗ್ರಾಮಸ್ಥರು ಪ್ರತಿಭಟಿಸಿದರು
ಪಾವಗಡ ತಾಲ್ಲೂಕಿನ ದೊಮ್ಮತಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಮ್ಮನಹಳ್ಳಿಯ ರಸ್ತೆಗಳು ಹಾಳಾಗಿರುವುದನ್ನು ಖಂಡಿಸಿ ಜಲಾವೃತ ರಸ್ತೆಯಲ್ಲಿ ನಿಂತು ಗ್ರಾಮಸ್ಥರು ಪ್ರತಿಭಟಿಸಿದರು   

ಪಾವಗಡ: ತಾಲ್ಲೂಕಿನ ದೊಮ್ಮತಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಕ್ಕಮ್ಮನಹಳ್ಳಿಯ ರಸ್ತೆಗಳು ಹಾಳಾಗಿವೆ ಎಂದು ಆರೋಪಿಸಿ ಗ್ರಾಮಸ್ಥರು ರಸ್ತೆ ಗುಂಡಿಗಳಲ್ಲಿ ನಿಂತು ಪ್ರತಿಭಟಿಸಿದರು.

ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿವೆ. ಗುಂಡಿಗಳಲ್ಲಿ ಮಳೆ ನೀರು ನಿಂತು ಹೊಂಡಗಳಾಗಿವೆ. ಜನರು ಆಸ್ಪತ್ರೆ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ರಸ್ತೆ ಸರಿಪಡಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ, ರಸ್ತೆ ಸರಿಪಡಿಸುತ್ತಿಲ್ಲ. ಸಮರ್ಪಕ ಚರಂಡಿ ಇಲ್ಲದ ಕಾರಣ ಕೊಳಚೆ ನೀರು ರಸ್ತೆಗೆ ಬರುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಿ ಸಾಂಕ್ರಾಮಿಕ ರೋಗಗಳು ಹೆಚ್ಚಿ ಜನತೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಳೆ ಬಂದರೆ ಸುಮಾರು ಮೂರು ಅಡಿಗಳಷ್ಟು ನೀರು ರಸ್ತೆಯಲ್ಲಿ ನಿಲ್ಲುತ್ತದೆ. ಮಕ್ಕಳು ವೃದ್ಧರು ಓಡಾಡಲು ಕಷ್ಟವಾಗುತ್ತಿದೆ ಎಂದು ದೂರಿದರು.

ADVERTISEMENT

ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಲಕ್ಷ್ಮಿನರಸಪ್ಪ, ರಾಮಾಂಜಿನಪ್ಪ, ಗೋವಿಂದಪ್ಪ, ಆಂಜಿನೇಯುಲು, ನಾರಾಯಣಪ್ಪ, ಪಾರ್ಥಸಾರಥಿ, ಶ್ರೀರಾಮಪ್ಪ,ಲಿಂಗಮಯ್ಯ, ಶ್ರೀನಿವಾಸುಲು, ನರಸಿಂಹಪ್ಪ, ರಾಮಾಂಜಿನೇ
ಯುಲು, ಪ್ರಶಾಂತ್, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.