ADVERTISEMENT

ಕುಣಿಗಲ್: ಕೊರೊನಾ ಕೇರ್ ಸೆಂಟರ್ ಪ್ರಾರಂಭ

​ಪ್ರಜಾವಾಣಿ ವಾರ್ತೆ
Published 19 ಜುಲೈ 2020, 16:53 IST
Last Updated 19 ಜುಲೈ 2020, 16:53 IST
ಕುಣಿಗಲ್ ತಾಲ್ಲೂಕು ಮಲ್ಲನಾಯಕನಹಳ್ಳಿಯಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ಕೊರೊನಾ ಕೇರ್ ಸೆಂಟರ್
ಕುಣಿಗಲ್ ತಾಲ್ಲೂಕು ಮಲ್ಲನಾಯಕನಹಳ್ಳಿಯಲ್ಲಿ ಸೋಮವಾರದಿಂದ ಪ್ರಾರಂಭವಾಗಲಿರುವ ಕೊರೊನಾ ಕೇರ್ ಸೆಂಟರ್   

ಕುಣಿಗಲ್: ತಾಲ್ಲೂಕಿನ ಎಡೆಯೂರು ಹೋಬಳಿಯ ಮಲ್ಲನಾಯಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸುಸಜ್ಜಿತವಾದ ಕೊರೊನಾ ಕೇರ್ ಸೆಂಟರ್ ಇದೇ 20ರಿಂದ ಪ್ರಾರಂಭವಾಗಲಿದೆ ಎಂದು ತಹಶೀಲ್ದಾರ್ ವಿಶ್ವನಾಥ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ತಾಲ್ಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಯಾವುದೇ ಗುಣಲಕ್ಷಣ ಇಲ್ಲದ ಸೋಂಕಿತರ ಸೇವೆಗೆ ಕೇರ್ ಸೆಂಟರ್ ಬಳಕೆಯಾಗಲಿದೆ. 112 ಹಾಸಿಗೆಯ ಕೇಂದ್ರದಲ್ಲಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆಗಳಿವೆ. ಸೋಂಕಿತರಿಗೆ ಅಗತ್ಯ ವಾದ ದಿನಬಳಕೆಯ ವಸ್ತುಗಳು, ಊಟ ತಿಂಡಿಯ ವ್ಯವಸ್ಥೆಯ ಜತೆಗೆ ಬಿಸಿ ನೀರಿನ ಸೌಲಭ್ಯ ನೀಡಲಾಗುವುದು. ಒಳಾಂಗಣ ಕ್ರೀಡಾ ಸಾಮಗ್ರಿಗಳಿದ್ದು, ನಿರಾತಂಕ ದಿಂದ ಬಳಸಿಕೊಂಡು ಆರೋಗ್ಯ ವಂತರಾಗಿ ಹಿಂತಿರುಗಲು ಅವಕಾಶ ಮಾಡಿಕೊಡಲಾಗುವುದು’ ಎಂದರು.

ತಾಲ್ಲೂಕು ವೈದ್ಯಾಧಿಕಾರಿ ಜಗದೀಶ್, ವೈದ್ಯರು ಸೇರಿದಂತೆ 12 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.