ಜಿಲ್ಲಾಧಿಕಾರಿ ಶುಭ ಕಲ್ಯಾಣ್
ತುಮಕೂರು: ‘ಈಗಿನ ಯುವ ಸಮೂಹದ ಮುಂದಿರುವ ದೊಡ್ಡ ಸವಾಲು ಸಾಮಾಜಿಕ ಜಾಲ ತಾಣ. ನಿಮಗೆ ಗೊತ್ತಿಲ್ಲದೆ ನಿಮ್ಮ ಸಮಯ ತಿನ್ನುತ್ತದೆ. ಇದರಿಂದ ಸಾಧ್ಯವಾದಷ್ಟು ದೂರ ಉಳಿಯಬೇಕು’ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಲಹೆ ಮಾಡಿದರು.
ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ‘ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿಗೆ ತುಂಬಾ ಧೀರ್ಘಕಾಲದ ಅಭ್ಯಾಸ ಅಗತ್ಯ. ಯಾವುದೇ ಒಂದು ವಿಷಯದ ಬಗ್ಗೆ ಆಳವಾದ ಅಧ್ಯಯನ ತುಂಬಾ ಮುಖ್ಯ. ಸಮಯ ಕಳೆಯಲು ಓದಿದರೆ ಯಾವುದೇ ಪ್ರಯೋಜನವಿಲ್ಲ. ಪ್ರತಿ ದಿನ ಎಂಟರಿಂದ ಹತ್ತು ಗಂಟೆ ಕಾಲ ಓದಿನಲ್ಲಿ ತೊಡಗಿಸಿಕೊಳ್ಳಬೇಕು. ನಾಲ್ಕು ಗಂಟೆ ದಿನ ಪತ್ರಿಕೆ ಓದಬೇಕು ಎಂದರು.
ಗುರಿ ಮುಟ್ಟಲೇಬೇಕು ಎಂಬ ಛಲ ಹೊಂದಿರಬೇಕು. ಮಾನಸಿಕ, ದೈಹಿಕವಾಗಿ ಸದೃಢರಾಗಬೇಕು. ಮೂರರಿಂದ ನಾಲ್ಕು ವರ್ಷ ಕಷ್ಟ ಪಡಬೇಕು. ಪ್ರಾಮಾಣಿಕವಾಗಿ ಓದಿದರೆ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂದು ಹೇಳಿದರು.
ತುಮಕೂರು: ‘6ರಿಂದ 12ನೇ ತರಗತಿ ವರೆಗಿನ ಎನ್‌ಸಿಇಆರ್‌ಟಿ ಪುಸ್ತಕ ಓದಿದರೆ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಸುಲಭವಾಗುತ್ತದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಸಲಹೆ ನೀಡಿದರು.
ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳು ಇರುತ್ತವೆ. ಮುಖ್ಯ ಪರೀಕ್ಷೆಯಲ್ಲಿ ಒಂಬತ್ತು ಪತ್ರಿಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಪರೀಕ್ಷೆ ಕುರಿತು ಪಿಪಿಟಿ ಮೂಲಕ ವಿವರಿಸಿದರು.
ವಾರದಲ್ಲಿ ಆರು ದಿನ ನಿರಂತರವಾಗಿ ಓದಬೇಕು. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕಂಠಪಾಠ ಮಾಡಲು ಆಗುವುದಿಲ್ಲ. ಪದೇ ಪದೇ ಓದುವ ಮೂಲಕ ಜ್ಞಾನ ಹೆಚ್ಚಿಸಿಕೊಳ್ಳಬೇಕು. ಪರೀಕ್ಷೆಗೂ ಮುನ್ನ ಹಿಂದಿನ ವರ್ಷದಲ್ಲಿ ನಡೆದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಅಭ್ಯಾಸ ಮಾಡಬೇಕು. ಮುಖ್ಯ ಪರೀಕ್ಷೆಗೂ ಮುನ್ನ 50ರಿಂದ 100 ಅಣಕು ಪರೀಕ್ಷೆಗಳನ್ನು ಬರೆಯಬೇಕು. ನಿರಂತರ ಓದು, ಸತತ ಪ್ರಯತ್ನದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.